ಶ್ರೀಶಂಕರಾಚಾರ್ಯ ಮಠದ ಕಡತ ನಾಪತ್ತೆ ಪ್ರಕರಣ: ಆರೋಪಿಗಳು ಅರೆಸ್ಟ್‌

ಬೆಂಗಳೂರು: ಶ್ರೀಶಂಕರಾಚಾರ್ಯ ಮಠದಲ್ಲಿ ಕಡತಗಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ನರಸಿಂಹಯ್ಯ, ಆನಂದ್.ಟಿ.ಆರ್, ಮಹೇಶ್ ಶರ್ಮಾ ಮತ್ತು ಕೃಷ್ಣ ಬಂಧಿತರ ಆರೋಪಿಗಳು. ಮತ್ತೊಬ್ಬ ಆರೋಪಿ ಮೃತ್ಯುಂಜಯ ಪರಾರಿಯಾಗಿದ್ದಾನೆ. ಇವರು ಮಠದ ಕೆಲವು ದಾಖಲೆಗಳನ್ನು ಹಾಗೂ ಕಡತಗಳನ್ನು ಕದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಡಾಬಸ್ ಪೇಟೆಯ ಶಿವಗಂಗೆ ಬಳಿಯಿರುವ ಶ್ರೀ ಶಂಕರಾಚಾರ್ಯ ಮಠದ ಕೆಲವು ದಾಖಲೆಗಳು ಹಾಗೂ ಕಡತಗಳು ಕಳೆದ ಜೂನ್‌ನಲ್ಲಿ ಕಾಣೆಯಾಗಿದ್ದವು. ಈ ಸಂಬಂಧ ಹೈಕೋರ್ಟ್ ವಕೀಲ ಶ್ರೀನಿವಾಸ್ ರಾವ್ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಈ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಇಂದು ನಾಲ್ವರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv