ಮೂರನೇ T20: ಟಾಸ್​ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್​ ಆಯ್ಕೆ..!

ನ್ಯೂಜಿಲೆಂಡ್​ನ ಹ್ಯಾಮಿಲ್ಟನ್​ನಲ್ಲಿ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್​ ಇಂಡಿಯಾ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದೆ. ಸದ್ಯ ಟಿ20 ಸರಣಿಯಲ್ಲಿ ಸಮಬಲ ಸಾಧಿಸಿರುವ ರೋಹಿತ್​ ಪಡೆ ಮೂರನೇ ಪಂದ್ಯವನ್ನ ಗೆಲ್ಲುವ ಉತ್ಸಾಹದಲ್ಲಿದೆ. ಕಳೆದ ಪಂದ್ಯದಲ್ಲಿ ಗೆದ್ದು ಬೀಗಿರುವ ಭಾರತ ಯಾವುದೇ ಬದಲಾವಣೆ ಮಾಡದೇ ಅದೇ ತಂಡವನ್ನ ಕಣಕ್ಕಿಳಿಸುತ್ತಿದೆ.