3 ರೈಲುಗಳ ಸಂಚಾರ ದಿಢೀರ್‌ ರದ್ದು: ಯಶವಂಶಪುರದಲ್ಲಿ ಪ್ರಯಾಣಿಕರ ಪರದಾಟ

ಬೆಂಗಳೂರು: ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಡಬೇಕಿದ್ದ ಮೂರು ರೈಲುಗಳ ಸಂಚಾರ ರದ್ದಾಗಿದೆ. ಪರಿಣಾಮ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು.
ನಿನ್ನೆ ರಾತ್ರಿ 7:30 ಕ್ಕೆ ಗೊರಕ್‌ಪುರ್​ಗೆ ಹೊರಡಬೇಕಿದ್ದ ದುರಂತ್ ಎಕ್ಸ್‌ಪ್ರೆಸ್, 10ಗಂಟೆಗೆ ಹಂಸಫರ್ ಎಕ್ಸ್‌ಪ್ರೆಸ್ ಮತ್ತು 11:40ಕ್ಕೆ ಮುಜಫರ್‌ಪುರ್​ಗೆ ಹೊರಡುವ ಗೋಹಾಟಿ ಎಕ್ಸ್‌ಪ್ರೆಸ್ ಸಂಚಾರ ಇದ್ದಕ್ಕಿದ್ದಂತೆ ರದ್ದಾಯಿತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಉತ್ತರ ಪ್ರದೇಶ, ಕೊಲ್ಕತ್ತಾ, ಆಂಧ್ರ ಪ್ರದೇಶ, ವಿಶಾಖಪಟ್ಟಣಂ, ಭುವನೇಶ್ವರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದ ಕಾರಣ ರೈಲು ಸಂಚಾರ ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ. ರೈಲು ಸಂಚಾರ ರದ್ದಾದ ಕಾರಣ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಟಿಕೆಟ್ ಹಣ ವಾಪಸ್ ನೀಡಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv