ಸಿಡಿಲು ಬಡಿದು 3 ಹುಲ್ಲಿನ ಬಣವೆಗಳು ಭಸ್ಮ

ಧಾರವಾಡ: ನಿನ್ನೆ ರಾತ್ರಿ ಸುರಿದ ಗುಡುಗು ಸಹಿತ ಮಳೆಯಿಂದಾಗಿ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಸಿಡಿಲು ಬಡಿದು ಮೂರು ಬಣವೆಗಳು ಸುಟ್ಟು ಬೂದಿಯಾಗಿವೆ. ನೇಮಣ್ಣ ಛಬ್ಬಿ ಎಂಬವರಿಗೆ ಸೇರಿದ ಎರಡು ಕಣಕಿ ಬಣವೆ ಹಾಗೂ ಒಂದು ಹೊಟ್ಟಿನ ಬಣವೆ ಬೆಂಕಿಗೆ ಆಹುತಿಯಾಗಿವೆ. ರಾತ್ರಿ ಗುಡುಗು ಸಹಿತ ಮಳೆ ಸುರಿಯಲಾರಂಭಿಸಿದ್ದು, ಬಣವೆಗಳಿಗೆ ಸಿಡಿಲು ಬಡಿದಿದೆ. ರಾತ್ರಿ ವೇಳೆ ಬಣವೆಗಳು ಹೊತ್ತಿ ಉರಿಯುತ್ತಿದ್ದುದನ್ನು ನೋಡಿದ ಕೆಲವರು ಮಾಲೀಕರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಕೂಡಲೇ ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು.ಬೆಳಿಗ್ಗೆಯೂ ಬೆಂಕಿ ಇನ್ನೂ ನಂದಿರಲಿಲ್ಲ. ಘಟನೆಯಿಂದ ₹1 ಲಕ್ಷ ಮೌಲ್ಯದ ಮೇವು ಬೆಂಕಿಗೆ ಆಹುತಿಯಾಗಿದೆ. ದನ, ಕರುಗಳಿಗೆ ತಿನ್ನಲು ಮೇವು ಇಲ್ಲದಂತಾಗಿದೆ ಅಂತ ನೇಮಣ್ಣ ತಮ್ಮ ಅಳಲು ತೋಡಿಕೊಂಡಿದ್ದಾರೆ.

 

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv