ತ್ರಿವಳಿ ವಂಚಕರು ಭಾರತಕ್ಕೆ ಬರೋದು ಮತ್ತಷ್ಟು ಲೇಟು..!

ನವದೆಹಲಿ: ಪಂಜಾಬ್​​ ನ್ಯಾಷನಲ್​​​ ಬ್ಯಾಂಕ್​​​ಗೆ ಬಹುಕೋಟಿ ವಂಚನೆ ಪ್ರಕರಣದ ಆರೋಪವನ್ನು ಎದುರಿಸುತ್ತಿರುವ ವಜ್ರ ವ್ಯಾಪಾರಿ ನೀರವ್​​ ಮೋದಿ, ಮೆಹುಲ್ ​​​​ಚೋಕ್ಸಿ ಹಾಗೂ ವಿವಿಧ ಬ್ಯಾಂಕ್​ಗಳಿಗೆ ಬಹುಕೋಟಿ ವಂಚಿಸಿದ ಆರೋಪಿ ಮದ್ಯದ ದೊರ ವಿಜಯ್​​ ಮಲ್ಯ ಹಸ್ತಾಂತರಕ್ಕೆ ಸಂಬಂಧಿಸಿ ಆ್ಯಂಟಿಗುವಾ, ಬರ್ಬುಡಾ ಮತ್ತು ಲಂಡ್​​ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಸ್ತಾಂತರಿಸುವಂತೆ ಭಾರತ ಆಗಸ್ಟ್​​​​ 3ರಂದು ಆ್ಯಂಟಿಗುವಾ, ಬರ್ಬುಡಾ ರಾಷ್ಟ್ರಗಳಿಗೆ ಕೋರಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್​​ ಕುಮಾರ್​​ ಸ್ಪಷ್ಟಪಡಿಸಿದ್ದಾರೆ.

ಹಸ್ತಾಂತರದ ಪ್ರಸ್ತಾಪವನ್ನು ಪರಿಶೀಲಿಸುತ್ತೇವೆ ಅಂತಷ್ಟೇ ಹೇಳಿದ್ದಾರೆ. ಬಳಿಕ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ.
ನೀರವ್​​ ಮೋದಿ ಮತ್ತು ಚೋಕ್ಸಿ ಹಸ್ತಾಂತರಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇಡಿ) ಈಗಾಗಲೇ ಇಬ್ಬರ ವಿರುದ್ಧ ರೆಡ್​​​ ಕಾರ್ನರ್​​​ ನೋಟಿಸ್​​ ಜಾರಿ ಮಾಡಿದೆ. ಇನ್ನ ಮದ್ಯ ದೊರೆ ವಿಜಯ್​​ ಮಲ್ಯನನ್ನು ಭಾರತಕ್ಕೆ ಕರೆ ತರುವ ಎಲ್ಲ ಪ್ರಯತ್ನಗಳು ಜಾರಿಯಲ್ಲಿವೆ. ಲಂಡನ್​​​​ನ ವೆಸ್ಟ್​​ಮಿನ್​ಸ್ಟರ್ ಮ್ಯಾಜಿಸ್ಟ್ರೇಟ್ಸ್​​​​​ ಕೋರ್ಟ್​​​ನಲ್ಲಿ ಸೆ.12ರಂದು ವಿಚಾರಣೆ ನಡೆಯಲಿದ್ದು, ಬಳಿಕ ಭಾರತಕ್ಕೆ ಕರೆತರುವಲ್ಲಿ ಪ್ರಯತ್ನಿಸಲಿದ್ದೇವೆ ಎಂದು ರವೀಶ್​​ ಕುಮಾರ್​​​ ಹೇಳಿದ್ದಾರೆ.​​​​​​​​​​

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv