ಈ 3 ವ್ಯಾಯಾಮ ಸಾಕು, ಹೆಚ್ಚು ಕ್ಯಾಲೋರಿಸ್​ ಬರ್ನ್​ ಮಾಡೋಕೆ..!

ಊಟ-ತಿಂಡಿ ತಿನ್ನುವ ವಿಷಯದಲ್ಲಿ ನಾವು ಎಷ್ಟು ಸ್ಮಾರ್ಟ್​ ಆಗಿ ಪ್ಲಾನ್​ ಮಾಡ್ತೀವೋ, ಅಷ್ಟೇ ಸ್ಮಾರ್ಟ್ ಆಗಿ ವ್ಯಾಯಾಮ ಮಾಡೋದು ಕೂಡಾ ಮುಖ್ಯ. ನಿಮ್ಮ ಗುರಿಗಳ ಆಧಾರದ ಮೇಲೆ ನೀವು ಎಷ್ಟು ವ್ಯಾಯಾಮ ಮಾಡಬೇಕೆಂದು ನಿರ್ಧರಿಸಬೇಕು. ಕೆಲವರು ತೂಕ ಇಳಿಕೆಗಾಗಿ ನಿರ್ದಿಷ್ಟ ಗೋಲ್ಸ್​ ಹೊಂದಿರುತ್ತಾರೆ. ಇದಕ್ಕಾಗಿ ಕಠಿಣ ವ್ಯಾಯಾಮ ಮಾಡಿ ಒಂದಷ್ಟು ಇಂಚಸ್​ ಕೂಡಾ ಕಡಿಮೆ ಮಾಡಿಕೊಳ್ಳುತ್ತಾರೆ. ಪರಿಣಾಮಕಾರಿಯಾಗಿ ನೀವು ನಿಮ್ಮ ಗುರಿಯನ್ನ ತಲುಪಲು ಸಹಾಯ ಮಾಡುವ ಅತ್ಯುತ್ತಮ ವ್ಯಾಯಾಮವನ್ನು ಆಯ್ಕೆ ಮಾಡಿಕೊಳ್ಳೊಂದ್ರಿಂದ ನೀವು ಬೇಗನೇ ನಿಮ್ಮ ಗುರಿಯನ್ನ ತಲುಪಬಹುದು. ಹೆಚ್ಚು ಕ್ಯಾಲೋರಿ ಬರ್ನ್​ ಮಾಡುವ ಮೂರು ಅತ್ಯುತ್ತಮ ವ್ಯಾಯಾಮಗಳು ಇಲ್ಲಿವೆ.

1. ಬರ್ಪಿ ವ್ಯಾಯಾಮಗಳು: ದೇಹದ ಅಧಿಕ ಕೊಬ್ಬನ್ನು ಕರಗಿಸಲು ಬರ್ಪೀಸ್ ಅದ್ಭುತವಾದ ವ್ಯಾಯಾಮವಾಗಿದೆ. ಬರ್ಪಿ ವ್ಯಾಯಾಮ ಮಾಡೋದ್ರಿಂದ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಕ್ಯಾಲೋರಿಗಳನ್ನ ಬರ್ನ್​ ಮಾಡಬಹುದು. ಬರ್ಪಿ ವ್ಯಾಯಾಮದಲ್ಲಿ ನಿಮ್ಮ ತೋಳುಗಳು, ಸೊಂಟ, ಎದೆ, ಕೋರ್, glutes ಮತ್ತು ಕಾಲುಗಳು ಹೆಚ್ಚು ವ್ಯಾಯಾಮದಲ್ಲಿ ತೊಡಗುತ್ತದೆ. ಇದು ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುತ್ತವೆ. ಇನ್ನೊಂದು ವಿಷ್ಯ ಅಂದರೆ ಬರ್ಪಿ ವ್ಯಾಯಾಮ ಮಾಡಲು ಯಾವುದೇ ಉಪಕರಣಗಳ ಅವಶ್ಯಕತೆ ಇಲ್ಲ. ಆದ್ದರಿಂದ ನೀವು ಯಾವುದೇ ಸಮಯದಲ್ಲಿ ಮತ್ತು ಎಲ್ಲಿ ಬೇಕಾದರೂ  ಮಾಡಬಹುದು. ಬರ್ಪಿ ವ್ಯಾಯಾಮಗಳನ್ನ ಮಾಡೋದ್ರಿಂದ, ಬಹು ಬೇಗ ತೂಕ ಕಳೆದುಕೊಳ್ಳಬಹುದು ಮತ್ತು ಹೊಟ್ಟೆಯಲ್ಲಿ ಶೇಖರಣೆಯಾದ ಕೊಬ್ಬನ್ನ ಸುಲಭವಾಗಿ ಕರಗಿಸಬಹುದು.

2. ಸ್ಕಿಪ್ಪಿಂಗ್​: ಚಿಕ್ಕ ಮಕ್ಕಳಿರುವಾಗ ಸಾಮಾನ್ಯವಾಗಿ ಎಲ್ಲರು ಸ್ಕಿಪ್ಪಿಂಗ್​ ಆಡಿರುತ್ತಾರೆ. ಆಗ ಇದೊಂಥರಾ ಮಕ್ಕಳ ಕ್ರೀಡೆಯಾಗಿತ್ತು. ಆದ್ರೆ ಇಂದು ಇದು ಜಿಮ್​ನಲ್ಲಿ ವ್ಯಾಯಾಮಗಳೊಂದಿಗೆ  ಸೇರಿಕೊಂಡಿದೆ. ಇನ್ನು ಸ್ಕಿಪ್ಪಿಂಗ್​ ಸರಳವಾದ ವ್ಯಾಯಾಮವಾಗಿದ್ದು, ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಮಧ್ಯಮ ವೇಗದಲ್ಲಿ ಸ್ಕಿಪ್ಪಿಂಗ್​ ಮಾಡುವುದರಿಂದ ಒಂದು ನಿಮಿಷಕ್ಕೆ 13 ಕ್ಯಾಲೋರಿಗಳನ್ನು ಕಳೆದುಕೊಳ್ಳಬಹುದು. ನೀವು ಒಂದು ನಿಮಿಷದಲ್ಲಿ 100 ಬಾರಿಯಾದರೂ ಸ್ಕಿಪ್ಪಿಂಗ್​ ಮಾಡಿರಬೇಕು.

3.  ಸ್ವಿಮ್ಮಿಂಗ್​: ಈಜು ಆರೋಗ್ಯಕ್ಕೆ ಎಷ್ಟು ಉತ್ತಮ ಅಂತಾ ಎಲ್ಲಾರಿಗೂ ಗೊತ್ತು. ನೀವು ಈಜುತ್ತಿದ್ದಾಗ ನಿಮ್ಮ ಕಾಲುಗಳು ಕಿಕ್ ಮಾಡುತ್ತಿದ್ರೆ, ನಿಮ್ಮ ತೋಳುಗಳು ನೀರನ್ನ ಸೀಳಿಕೊಂಡು ಮುಂದಕ್ಕೆ ಹೋಗಲು ಸಹಾಯ ಮಾಡುತ್ತದೆ. ಇದಕ್ಕೆ ಹೆಚ್ಚಿನ ಶ್ರಮ ಅಗತ್ಯವಿದ್ದು, ಹೆಚ್ಚು ಕ್ಯಾಲೋರಿಗಳನ್ನ ಬರ್ನ್​ ಮಾಡುತ್ತದೆ. ಬಟರ್​ ಫ್ಲೈ ಸ್ಟ್ರೋಕ್​ ಹಾಗೂ ಬ್ರೆಸ್ಟ್​ ಸ್ಟ್ರೋಕ್​ ಮಾಡುವುದರಿಂದ ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು. ಇದಲ್ಲದೆ,  ಈಜುವುದರಲ್ಲಿಯೂ ವ್ಯತ್ಯಾಸವಿದೆ. ಉದಾಹರಣೆಗೆ, ನೀವು ಸ್ವಿಮ್ಮಿಂಗ್​ ಪೂಲ್​ನಲ್ಲಿ ಈಜುವುದಕ್ಕಿಂತ ಸಮುದ್ರದಲ್ಲಿ ಈಜಿದ್ರೆ, ಹೆಚ್ಚು ಕ್ಯಾಲೋರಿಗಳು ಬರ್ನ್​ ಆಗುತ್ತದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv