ವೈಟಿಪಿಎಸ್​​ ಹೊಂಡದಲ್ಲಿ ಕಲುಷಿತ ನೀರಿನಿಂದ ಮೊಸಳೆ, ಮೀನುಗಳ ಸಾವು..!

ರಾಯಚೂರು: ವೈಟಿಪಿಎಸ್ ಘಟಕದ ನೀರಿನ ಹೊಂಡದಲ್ಲಿ ರಾಸಾಯನಿಕ ಕಲುಷಿತ ನೀರಿನಿಂದಾಗಿ 3 ಮೊಸಳೆಗಳು ಹಾಗೂ ಸಾವಿರಾರು ಮೀನುಗಳು ಮೃತಪಟ್ಟಿವೆ. ವೈಟಿಪಿಎಸ್​​ ಘಟಕದ ಬಳಕೆಗೆ ಕೃಷ್ಣಾ ನದಿಯಿಂದ ಹೊಂಡದಲ್ಲಿ ನೀರನ್ನು ಶೇಖರಿಸಲಾಗುತ್ತದೆ. ಹೊಂಡದ ಪಕ್ಕದಲ್ಲಿಯೇ ಹಾರುಬೂದಿ ಹೊಂಡ ಸಹ ಇದೆ. ಹಾರುಬೂದಿ ಹೊಂಡದಿಂದ ರಾಸಾಯನಿಕ ನೀರು ಕಲುಷಿತವಾಗಿ ಜಲಚರಗಳು ಮೃತಪಟ್ಟಿವೆ.
ಜಲಚರಗಳ ಕಳೆಬರಹದ ವಾಸನೆ ಸುತ್ತಮುತ್ತ ಹಬ್ಬಿದ್ದು, ಒಂದು ಮೊಸಳೆಯ ಕಳೆಬರಹ ತೇಲಾಡುತ್ತಿದೆ. ದುರ್ವಾಸನೆಯಿಂದ ಜಾಕ್ವೆಲ್​​​​​​​​ಗೆ ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv