ಮೋದಿ ಕಾರ್ಯಕ್ರಮಕ್ಕೆ ಮೂವರು ಸಂಸದರಿಂದ ಬಹಿಷ್ಕಾರ!

ಅಗರ್ತಾಲ: ತ್ರಿಪುರದಲ್ಲಿಂದು ನಡೆಯಲಿರುವ ಪ್ರಧಾನಿ ಮೋದಿ ಱಲಿ ವಿರೋಧಿಸಿ ಮೂವರು ಸಿಪಿಐ-ಎಂ ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಕ್ಯಾಬಿನೆಟ್​ನಲ್ಲಿ ಮಂಡನೆಯಾದ ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆಯನ್ನ ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಲೋಕಸಭಾ ಸಂಸದರಾದ ಜಿತೇಂದ್ರ ಚೌಧರಿ, ಶಂಕರ್​ ಪ್ರಸಾದ್​ ದತ್ತಾ ಮತ್ತು ರಾಜ್ಯಸಭಾ ಸದಸ್ಯ ಝರ್ನಾ ದಾಸ್​​ ಬೈದ್ಯಾ ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಅಗರ್ತಾಲಾದಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಕಾರ್ಯಕ್ರಮವನ್ನ ನಾವು ಬಹಿಷ್ಕರಿಸುತ್ತಿದ್ದೇವೆ ಅಂತ ಹೇಳಿದ್ದಾರೆ. ತ್ರಿಪುರದ ಕೊನೆಯ ಅರಸ ಬಿರ್ಬಿಕ್ರಮ್ ಕಿಶೋರ್ ಮಾಣಿಕ್ಯ ಬಹದ್ದೂರ್ ಪ್ರತಿಮೆ ಅನಾವರಣ ಸೇರಿದಂತೆ ಹಲವು ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ.


Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv