2ನೇ ಟೆಸ್ಟ್, 2ನೇ ಸೆಷನ್​​​- ಕುಲ್​ದೀಪ್ ಸ್ಪಿನ್​ಗೆ ವಿಂಡೀಸ್ ಗಲಿಬಿಲಿ..!

ಮೊದಲ ಸೆಷನ್ ಅಂತ್ಯಕ್ಕೆ 86 ರನ್​ಗಳಿಸಿ 3 ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್, ಎರಡನೇ ಸೆಷನ್​ನಲ್ಲಿ ಚೇತರಿಕೆ ಕಂಡಿತು. ಇನ್ನಿಂಗ್ಸ್​ ಆರಂಭದಲ್ಲಿ 12 ರನ್​ಗಳಿಸಿದ್ದ ಎಡಗೈ ಬ್ಯಾಟ್ಸ್​ಮನ್ ಶಿಮ್ರನ್ ಹೇಟ್ಮರ್ ಮತ್ತು ಸುನಿಲ್ ಅಂಬ್ರಿಸ್,​ ಚೈನಾಮನ್ ಸ್ಪಿನ್ನರ್ ಕುಲ್​ದೀಪ್ ಯಾದವ್​ಗೆ ವಿಕೆಟ್ ಒಪ್ಪಿಸಿದ್ರು. ನಂತರ 6ನೇ ವಿಕೆಟ್​ಗೆ ಜೊತೆಯಾದ ರೊಸ್ಟನ್ ಚೇಸ್ ಮತ್ತು ಶೇನ್ ಡೌರಿಚ್ ಜೋಡಿ, 69 ರನ್​ಗಳ ಕಾಣಿಕೆ ನೀಡಿ, ವಿಂಡೀಸ್ ಕುಸಿತಕ್ಕೆ ಬ್ರೇಕ್ ಹಾಕಿತು. ಈ ನಡುವೆ ಡೌರಿಚ್ 30 ರನ್​ಗಳಿಸಿ ವೇಗಿ ಉಮೇಶ್​ ಯಾದವ್​ ಬೌಲಿಂಗ್​ನಲ್ಲಿ, ಲೆಗ್​ ಬಿಫೋರ್ ವಿಕೆಟ್ ಆದ್ರು. ಮತ್ತೊಂದೆಡೆ ಕ್ರೀಸ್​ನಲ್ಲಿ ನಿಂತು ಸಾಲಿಡ್ ಬ್ಯಾಟಿಂಗ್ ಪ್ರದರ್ಶಿಸಿದ ರೊಸ್ಟನ್ ಚೇಸ್, ಆಕರ್ಷಕ ಅರ್ಧಶತಕ ಸಿಡಿಸಿ ಸಂಭ್ರಮಿಸಿಕೊಂಡ್ರು. ಅಂತಿಮವಾಗಿ ಎರಡನೇ ಸೆಷನ್ ಮುಕ್ತಾಯಕ್ಕೆ ವಿಂಡೀಸ್, 6 ವಿಕೆಟ್ ಕಳೆದುಕೊಂಡು 197 ರನ್​ಗಳಿಸಿತು. ಕುಲ್​ದೀಪ್ ಯಾದವ್​ 3 ವಿಕೆಟ್ ಪಡೆದ್ರೆ, ಉಮೇಶ್ ಯಾದವ್ 2 ಮತ್ತು ಅಶ್ವಿನ್ 1 ವಿಕೆಟ್ ಪಡೆದು ಮಿಂಚಿದ್ರು. ವಿಂಡೀಸ್ ಪರ ರೊಸ್ಟನ್ ಚೇಸ್ ಅಜೇಯ 50 ರನ್ ಮತ್ತು ನಾಯಕ ಜೇಸನ್ ಹೋಲ್ಡರ್ 10 ರನ್​ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.