ಅಯೋಧ್ಯೆಗೆ ಖಾಕಿ ಸರ್ಪಗಾವಲು.. ಯಾಕೆ ಗೊತ್ತಾ..?

ಅಯೋಧ್ಯ: ಬಾಬ್ರಿ ಮಸೀದಿ ಕೆಡವಿ ಇಂದಿಗೆ 26 ವರ್ಷ ಕಳೆದ ಹಿನ್ನೆಲೆ ಅಯೋಧ್ಯೆಯಲ್ಲಿ ವಿವಿಧ ಹಂತಗಳಲ್ಲಿ ಪೋಲೀಸ್​ ಬಿಗಿ ಬಂದೋಬಸ್ತ್​ ಒದಗಿಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್​ ನೂರಕ್ಕೂ ಹೆಚ್ಚು ಸಿಬ್ಬಂದಿಯನ್ನ ವಿವಾದಿತ ಸ್ಥಳದಲ್ಲಿ ನೇಮಿಸಿದ್ದಾರೆ ಎನ್ನಲಾಗಿದೆ. ಒಂದಿಕಡೆ ಡಿಸೆಂಬರ್​ 6 ಅಂದ್ರೆ ಇಂದಿನ ದಿನವನ್ನು ವಿಜಯ ದಿನ ಹಾಗೂ ಶೌರ್ಯ ದಿನವನ್ನಾಗಿ ಆಚರಿಸೋದಾಗಿ ವಿಶ್ವ ಹಿಂದೂ ಪರಿಷತ್​ ಹಾಗೂ ಭಜರಂಗ ದಳದ ಕಾರ್ಯರ್ಕತರು ಹೇಳಿಕೊಂಡಿದ್ರೆ. ಹೀಗಾಗಿಯೇ ಇಂದು ದೀಪ ಹಚ್ಚಿ ದಿನದ ಸಂಭ್ರಮಾಚರಣೆ ಮಾಡುವಂತೆ ಜನರಿಗೆ ಕರೆ ನೀಡಿದೆ. ಇನ್ನೊಂದು ಕಡೆ ಮುಸ್ಲೀಂ ಸಮುದಾಯದವ್ರು, ಈದಿನವನ್ನ ಕರಾಳ ಹಾಗೂ ದುಃಖದ ದಿನವನ್ನಾಗಿ ಆಚರಿಸೋದಾಗಿ ಹೇಳಿದೆ. ಇನ್ನೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಯುಪಿ ಸರ್ಕಾರ ಎಚ್ಚರವಹಿಸಿದ್ದು, ಈ ಗಾಗಲೇ 2500 ಪೊಲೀಸರ​ ಪಡೆ, ಱಪಿಡ್​ ಆ್ಯಕ್ಷನ್​ ಫೋರ್ಸ್​​ ಹಾಗೂ ಸಿಆರ್​ಪಿಎಫ್​ ತಂಡಗಳು ವಿವಿಧ ಹಂತದಲ್ಲಿ ಕಾರ್ಯ ನಿರ್ವಹಿಸಲಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv