ಇಲ್ಲಿವರೆಗೂ ಸೀಜ್ ಆಗಿರೋದು ₹2,626 ಕೋಟಿ..!

ನವದೆಹಲಿ: ಲೋಕಸಭಾ ಚುನಾವಣೆಗೆ ದಿನಾಂಕ ಅನೌನ್ಸ್​ ಆದಾಗಿನಿಂದ ಈವರೆಗೂ ಚುನಾವಣಣಾಧಿಕಾರಿಗಳು ಬರೋಬ್ಬರಿ 2,626 ಕೋಟಿ ರೂಪಾಯಿ ಮೌಲ್ಯದ ಹಣ, ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ಸುಮಾರು 607 ಕೋಟಿ ರೂಪಾಯಿ ನಗದು, 1,978 ಕೋಟಿ ಮೌಲ್ಯದ ಮದ್ಯ, 1,091 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್​​ ಹಾಗೂ 486 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನ ಚುನಾವಣಾ ಆಯೋಗ ವಶಪಡಿಸಿಕೊಂಡಿದೆ. ಒಟ್ಟಾರೆಯಾಗಿ ಸುಮಾರು 2,626 ಕೋಟಿ ಮೌಲ್ಯದ ಹಣ, ವಸ್ತುಗಳನ್ನ ಸೀಜ್​ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಚುನಾವಣೆ ಹಿನ್ನೆಲೆ ಕೋಟಿ ಕೋಟಿ ಕಾಂಚಾಣ ಕುಣಿದಾಡುತ್ತಿದ್ದು, ಇದರ ಮೇಲೆ ಆಯೋಗ ಹದ್ದಿನ ಕಣ್ಣಿಟ್ಟಿದೆ. ನಿನ್ನೆ 18 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೊದಲ ಹಂತದ ಚುನಾವಣೆ ನಡೆದಿದ್ದು, ಈವರೆಗೂ ಇಷ್ಟು ಹಣ ಹರಿದಾಡಿದೆ. ಎಲೆಕ್ಷನ್​ ಮುಗಿಯೋವರೆಗೂ ಅಕ್ರಮದ ವಿರುದ್ಧ ಬೇಟೆಯಾಡಲು ಚುನಾವಣಾಧಿಕಾರಿಗಳು ಸಿದ್ಧರಾಗಿದ್ದು, ಎಲ್ಲ ಚಟುವಟಿಕೆಗಳ ಮೇಲೂ ನಿಗಾ ವಹಿಸಿದ್ದಾರೆ.