ವಿಧಾನಸೌಧದಲ್ಲಿ ಹಣ ಪತ್ತೆ, ಮೋಹನ್​ಗೆ ನ್ಯಾಯಾಂಗ ಬಂಧನ

ಬೆಂಗಳೂರು: ವಿಧಾನಸೌಧದ ವೆಸ್ಟ್​ ಗೇಟ್ ಬಳಿ ₹ 25.76 ಲಕ್ಷ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೋಪಿ‌ ಮೋಹನ್​ಗೆ ಕೋರ್ಟ್​ ನ್ಯಾಯಾಂಗ ಬಂಧನ ವಿಧಿಸಿದೆ.

ಜನವರಿ 4ರಂದು ವಿಧಾನಸೌಧದ ವೆಸ್ಟ್ ಗೇಟ್ ಬಳಿ ಸಚಿವ ಪುಟ್ಟರಂಗ ಶೆಟ್ಟಿ ಕಚೇರಿಯ ಸಿಬ್ಬಂದಿ ಮೋಹನ್​ ಹಣದೊಂದಿಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದ. ಈ ಸಂಬಂಧ ಮೋಹನ್​ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ರು. ಬಳಿಕ ಈ ಪ್ರಕರಣವನ್ನು ಎಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ​ಇಂದು ಆರೋಪಿ ಮೋಹನ್​ನನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ವೇಳೆ ವಾದ-ಪ್ರತಿವಾದ ಆಲಿಸಿದ ವಿಶೇಷ ನ್ಯಾಯಾಲಯದ 24 ನೇ ಸೆಷನ್ಸ್ ಜಡ್ಜ್ ಮಂಜುಳಾ ಇಟ್ಟಿ, ಆರೋಪಿ ಮೋಹನ್​ಗೆ ಜ.24 ರ ತನಕ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಅಲ್ಲದೇ, ಜಾಮೀನು ಅರ್ಜಿ‌ ವಿಚಾರಣೆಯನ್ನು ಜ. 14 ಕ್ಕೆ ಮುಂದೂಡಿದ್ದಾರೆ.