ಭಾರೀ ಮಳೆಗೆ 25ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಮಂಡ್ಯ: ರಾತ್ರಿ ಸುರಿದ ಭಾರೀ ಮಳೆಗೆ ಸುಮಾರು 25ಕ್ಕೂ ಹೆಚ್ಚು ಮನೆಗಳು ಹಾನಿಯಾಗಿರೋ ಘಟನೆ ಮಳವಳ್ಳಿ ತಾಲೂಕು ಬಾಳೆಹೊನ್ನಿಗ ಗ್ರಾಮದಲ್ಲಿ  ನಡೆದಿದೆ. ಬಿರುಗಾಳಿಗೆ ಮನೆಗಳ ಹೆಂಚುಗಳು ಹಾಗೂ ಶೀಟ್​ಗಳು ಹಾರಿಹೋಗಿವೆ. ದವಸ ಧಾನ್ಯ, ಟಿವಿ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್​ ವಸ್ತುಗಳು ಮಳೆಗೆ ಹಾನಿಯಾಗಿವೆ. ಇನ್ನೂ ಮಳೆಯ ಅವಾಂತರದಿಂದ 25 ಕುಟುಂಬಗಳು ಬೀದಿಗೆ ಬಿದ್ದಿವೆ. ಗ್ರಾಮಪಂಚಾಯಿತಿ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv