3 ದಿನಗಳಲ್ಲಿ ವಾದ್ರಾಗೆ 24 ಗಂಟೆಗಳ ಕಾಲ ವಿಚಾರಣೆ..!

ನವದೆಹಲಿ: ಅಕ್ರಮ ಹಣ ಸಾಗಣೆ ಆರೋಪ ಎದುರಿಸುತ್ತಿರುವ ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿಯವರ ಅಳಿಯ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಜಾರಿ ನಿರ್ದೇಶನಾಲಯದ ಎದುರು 3 ದಿನಗಳ ಕಾಲ ವಿಚಾರಣೆಗೆ ಹಾಜರಾಗಿದ್ದಾರೆ.

ಬುಧವಾರ ಹಾಗೂ ಗುರುವಾರ ವಿಚಾರಣೆಗೆ ಹಾಜರಾಗಿದ್ದ ವಾದ್ರಾ, 3ನೇ ದಿನವಾದ ನಿನ್ನೆ ದೆಹಲಿಯ ಜಾಮ್ ನಗರ್ ಹೌಸ್​ನಲ್ಲಿರುವ ಜಾರಿ ನಿರ್ದೇಶನಾಲಯಕ್ಕೆ ಬೆಳಗ್ಗೆಯೇ ಆಗಮಿಸಿದ್ರು.

ಒಟ್ಟು 3 ದಿನಗಳ ಕಾಲ ವಾದ್ರಾ ವಿಚಾರಣೆ ನಡೆದಿದ್ದು, 24 ಗಂಟೆಗಳ ಅವಧಿಯಷ್ಟು ವಿಚಾರಣೆಗೊಳಪಡಿಸಲಾಗಿದೆ. ವಾದ್ರಾ ಲಂಡನ್​ನಲ್ಲಿ ಹಲವು ಆಸ್ತಿಗಳನ್ನ ಹೊಂದಿದ್ದಾರೆ ಅಂತಾ ಇಡಿ ಆರೋಪಿಸಿದೆ. ಇದರ ಬಗ್ಗೆಯೇ ಸತತ ವಿಚಾರಣೆ ನಡೆಸಲಾಗಿದ್ದು, ಹಲವು ಮಾಹಿತಿಯನ್ನೂ ಕಲೆ ಹಾಕಿದೆ ಎನ್ನಲಾಗಿದೆ. ಇದಕ್ಕೆ ವಾದ್ರಾ ಕೆಲ ಪ್ರಶ್ನೆಗಳಿಗೆ ನೇರ ಉತ್ತರಗಳನ್ನ ನೀಡಿದ್ರೆ, ಮತ್ತಷ್ಟು ಪ್ರಶ್ನೆಗಳಿಗೆ ನನಗೆ ಏನೂ ಗೊತ್ತಿಲ್ಲ ಅಂತ ಹೇಳಿದ್ದಾರೆ. ಇನ್ನು ಕೆಲ ಪ್ರಶ್ನೆಗಳಿಗೆ ನಾನು ನಿರಪರಾಧಿ ಅಂತಷ್ಟೆ ಉತ್ತರಿಸಿದ್ದಾರೆ ಎನ್ನಲಾಗಿದೆ.

ಅಕ್ರಮ ಹಣ ಸಾಗಣೆ, ಅಕ್ರಮ ಆಸ್ತಿಗಳಿಕೆ ಆರೋಪ ಎದುರಿಸುತ್ತಿರುವ ರಾಬರ್ಟ್ ವಾದ್ರಾಗೆ ಫೆಬ್ರವರಿ 2ರಂದು ಮಧ್ಯಂತರ ಜಾಮೀನು ಸಿಕ್ಕಿತ್ತು. ಫೆಬ್ರವರಿ 16ರವರೆಗೂ ಮಧ್ಯಂತರ ಜಾಮೀನು ಅವಧಿ ಮುಂದುವರಿಯಲಿದ್ದು, ಅಲ್ಲಿವರೆಗೂ ವಾದ್ರಾರನ್ನ ಬಂಧಿಸದಂತೆ ಕೋರ್ಟ್ ಆದೇಶಿಸಿದೆ. ಆದ್ರೆ, ಅವಶ್ಯಕತೆ ಇದ್ದಾಗ ಇಡಿ ಎದುರು ವಿಚಾರಣೆಗೆ ಹಾಜರಾಗಬೇಕು ಅಂತ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಬರ್ಟ್ ವಾದ್ರಾ ವಿಚಾರಣೆಗೆ ಹಾಜರಾಗುತ್ತಿದ್ದಾರೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv