ಕ್ಷುಲ್ಲಕ ಕಾರಣಕ್ಕೆ 150 ಕುರಿಗಳಿಗೆ ವಿಷಪ್ರಾಶನ..!

ರಾಯಚೂರು: ಕ್ಷುಲ್ಲಕ ಕಾರಣಕ್ಕೆ ಕುರಿಗಳಿಗೆ ವಿಷಪ್ರಾಶನ ಮಾಡಿಸಿದ ಕಾರಣ, 20ಕ್ಕೂ ಹೆಚ್ಚು ಕುರಿಗಳು ಸಾವನಪ್ಪಿರುವ ಘಟನೆ ಲಿಂಗಸುಗೂರು ತಾಲೂಕಿನ ರೋಡಲಬಂಡ ಗ್ರಾಮದಲ್ಲಿ ನಡೆದಿದೆ. ರೋಡಲಬಂಡ ಗ್ರಾಮದ ಪಕ್ಕದಲ್ಲಿರುವ ತವಗ ಗ್ರಾಮದ ಮಲ್ಲಣ್ಣ ಎಂಬವರು ಈ ಕೃತ್ಯವೆಸಗಿದ್ದಾರೆ ಅಂತಾ ಆರೋಪಿಸಲಾಗ್ತಿದೆ. ಖಾಲಿ ಹೊಲದಲ್ಲಿ ಕುರಿಗಳು ಮೇಯಲು ಬರುತ್ತವೆ ಎಂಬ ಕಾರಣಕ್ಕೆ ಅಕ್ಕಿ, ಸಜ್ಜೆಯಲ್ಲಿ ವಿಷ ಬೆರೆಸಿ ಹೊಲದಲ್ಲಿಟ್ಟಿದ್ದರು. ಅದನ್ನು ತಿಂದ ರೋಡಲಬಂಡ ಗ್ರಾಮದ ಚಂದಪ್ಪ ಎಂಬುವವರಿಗೆ ಸೇರಿದ 150 ಕುರಿಗಳು ಅಸ್ವಸ್ಥಗೊಂಡಿವೆ. ಇವುಗಳಲ್ಲಿ ಈಗಾಗಲೆ 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಇನ್ನು ಹಲವು ಸಾವು ಬದುಕಿನ ನಡುವಿನ ಹೋರಾಟದಲ್ಲಿವೆ ಎನ್ನಲಾಗ್ತಿದೆ. ಕಣ್ಣುಮುಂದೆಯೇ ಕುರಿಗಳು ಸಾಯುತ್ತಿರುವುದನ್ನು ಕಂಡು ಮಾಲೀಕ ಚಂದಪ್ಪ ಕಂಗಾಲಾಗಿದ್ದಾರೆ.