ಸಿಂಹ ಸಿಂಹಾನೆ..! 20 ಸೀಳು ನಾಯಿಗಳು ದಾಳಿ ಮಾಡಿದ್ರೂ ಸಿಂಹವನ್ನು ಮಣಿಸಲು ಆಗ್ಲಿಲ್ಲ..!

ಸಿಂಹದ ಗತ್ತು, ಗಾಂಭೀರ್ಯ ಹೇಗಿರುತ್ತೆ ಅಂತ ಹತ್ತಿರದಿಂದ ನೋಡಿದೋರಿಗೇ ಗೊತ್ತು. ಸಾಮಾನ್ಯವಾಗಿ ಸಿಂಹಗಳು ಇತರೆ ಪ್ರಾಣಿಗಳನ್ನ ಬೇಟೆಯಾಡೋ ದೃಶ್ಯ ನೋಡಿರ್ತೀರ. ಆದರೆ ಮೊನ್ನೆ ಬಿಬಿಸಿ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮ ನೋಡುಗರನ್ನ ಸೀಟ್​ ತುದಿಗೆ ಬಂದು ಕೂರುವಂತೆ ಮಾಡಿತ್ತು. ಆ ಕಾರ್ಯಕ್ರಮದಲ್ಲಿ ಒಂದು ಸಿಂಹವನ್ನು 20 ಹೈನಾಗಳು ಸುತ್ತುವರಿದು ದಾಳಿ ಮಾಡೋದನ್ನ ತೋರಿಸಲಾಗಿತ್ತು. ರೆಡ್​​ ಎಂಬ ಹೆಸರಿನ ಸಿಂಹ ಒಂಟಿಯಾಗಿ ಓಡಾಡುತ್ತಾ ಹೈನಾಗಳ ಗುಂಪಿದ್ದ ಜಾಗಕ್ಕೆ ಬಂದಿತ್ತು. ಕೂಡಲೇ ಸುಮಾರು 20 ಹೈನಾಗಳು ಕಾಡಿನ ರಾಜನ ಮೇಲೆ ದಾಳಿ ಮಾಡಿ, ಕಿರುಚಾಡತೊಡಗಿದವು. ಸಿಂಹ ಆ ಹೈನಾಗಳನ್ನ ಓಡಿಸಲು ಪ್ರಯತ್ನಿಸಿದರೂ ಮತ್ತೆ ಮತ್ತೆ ಅವು ಸಿಂಹವನ್ನ ಸುತ್ತುವರಿದಿದ್ದವು.

ಈ ಹೈನಾಗಳು ಸೇರಿಕೊಂಡು ಸಿಂಹವನ್ನು ಸಾಯಿಸಿಬಿಡಬಹುದಿತ್ತು ಅಂತ ನಿರೂಪಕ ಅಟ್ಟನ್​ಬರೋ ಹೇಳ್ತಾರೆ. ಹೈನಾಗಳು ಸಿಂಹದ ಕಾಲುಗಳಿಗೆ ಕಚ್ಚಿ ಅದನ್ನ ಮಣಿಸಲು ಪ್ರಯತ್ನಿಸುತ್ತಿದ್ದವು. ಹೀಗಾಗಿ ತುಂಬಾ ಸಮಯದವರೆಗೆ ಆ ಸಿಂಹಕ್ಕೆ ಹೈನಾಗಳ ವಿರುದ್ಧ ಹೋರಾಡಲು ಆಗುತ್ತಿರಲಿಲ್ಲ. ಆಗ ಎಂಟ್ರಿ ಕೊಟ್ಟಿದ್ದೇ ಮತ್ತೊಂದು ಸಿಂಹ ಟಾಟು.

ಟಾಟು ಬಂದಿದ್ದೇ ತಡ, ಹೈನಾಗಳ ಹಿಂಡಿನ ಮೇಲೆ ದಾಳಿ ಮಾಡಿ ಅವನ್ನು ಹೆಸರಿಸಿ ಓಡಿಸುತ್ತೆ. 20 ಹೈನಾಗಳಿದ್ದರೂ 2 ಸಿಂಹಗಳನ್ನ ಎಸುರಿಸಲು ಹೈನಾಗಳಿಗೆ ಕಷ್ಟವೇ ಆಯ್ತು ಅಂತ ಕೊನೆಯಲ್ಲಿ ಅಟ್ಟೆನ್​ಬರೋ ಹೇಳ್ತಾರೆ. ನಂತರ ಎರಡೂ ಗಂಡು ಸಿಂಹಗಳು ಆಟವಾಡ್ತಾ ಹುಲ್ಲಿನ ಮೇಲೆ ಬಿದ್ದು ಹೊರಡೋಳಾದನ್ನ ಕಾಣಬಹುದು. ಟಾಟೂ ಸರಿಯಾದ ಸಮಯಕ್ಕೆ ಬಂದು ತನ್ನ ಗೆಳೆಯನನ್ನ ಕಾಪಾಡೋ ಈ ವಿಡಿಯೋ ವೈರಲ್ ಆಗಿದ್ದು, ನೋಡುಗರ ಹುಬ್ಬೇರುವಂತೆ ಮಾಡಿದೆ.