ಸ್ಟೀಲ್​ ಪಿಲ್ಲರ್​ಗಳ ಮಧ್ಯೆ ಸಿಲುಕಿದ ಬಾಲಕಿ ರಕ್ಷಣೆ

ತಮಿಳುನಾಡು: ಪುಟ್ಟ ಮಕ್ಕಳು ಆಟವಾಡುತ್ತಾ ಕೆಲವೊಮ್ಮೆ ಅವಘಡಗಳನ್ನ ಮಾಡಿಕೊಳ್ತಾರೆ. ಒಮ್ಮೆ ಗೊತ್ತಿಲ್ಲದೆ ಬಿಸಿ ನೀರಿಗೆ ಕೈ ಹಾಕಿದ್ರೆ, ಕೆಲವೊಮ್ಮೆ ಮನೆ ಗೇಟಿನ ಕಂಬಿಗಳ ನಡುವೆ ತಲೆ ಹಾಕಿ, ಅನಾಹುತವನ್ನೇ ಮೈಮೇಲೆ ಎಳೆದುಕೊಂಡ ಪ್ರಸಂಗಗಳ ಬಗ್ಗೆ ಕೇಳಿರಬಹುದು. ಇದೀಗ ಅಂತದ್ದೇ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. 2 ವರ್ಷದ ಬಾಲಕಿಯ ತಲೆ ಎರಡು ಸ್ಟೀಲ್​ ಪಿಲ್ಲರ್​ಗಳ ನಡುವೆ ಸಿಲುಕಿದ ಘಟನೆ ತಿರುವಳ್ಳೂರು ರೇಲ್ವೆ ನಿಲ್ದಾಣದಲ್ಲಿ ನಡೆದಿದೆ. ರೇಲ್ವೆ ನಿಲ್ದಾಣದಲ್ಲಿ ಕೀರ್ತನಾ ಎಂಬ ಬಾಲಕಿ ಆಟವಾಡುತ್ತಿದ್ದ ವೇಳೆ ಈ ಯಡವಟ್ಟು ನಡೆದಿದೆ. ಬಾಲಕಿಯ ರೋಧನೆ ಕೇಳಿ ಓಡಿಬಂದ ಪೋಷಕರು, ಪಿಲ್ಲರ್​ ಬೆಂಡ್ ಮಾಡಲು ಪ್ರಯತ್ನಿಸಿ ವಿಫಲವಾಗಿದ್ದಾರೆ. ನಂತರ ರೇಲ್ವೆ ಪೊಲೀಸರ ಸಹಾಯದಿಂದ ಬಾಲಕಿಯನ್ನು ಹೊರತೆಗೆಯಲಾಗಿದೆ. ವೆಲ್ಡಿಂಗ್​ ಯಂತ್ರ ಬಳಸಿ ಬಾಲಕಿಯನ್ನು ರಕ್ಷಿಸಿ, ಪೋಷಕರಿಗೆ ಒಪ್ಪಿಸಿದ್ದಾರೆ.


Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv