₹74,000ಕ್ಕೂ ಹೆಚ್ಚು ಮೊತ್ತದ ನೋಟ್​ ಚಿಂದಿ ಚಿತ್ರಾನ್ನ ..!

ಮಕ್ಕಳು ಹಠ ಮಾಡಿ ಆಟಿಕೆ ವಸ್ತುಗಳನ್ನ ತರಿಸಿಕೊಳ್ತಾರೆ. ಆದ್ರೆ ಮೂರ್ನಾಲ್ಕು ದಿನದಲ್ಲೇ ಅವನ್ನ ಮುರಿದು ಮೂಲೆಗಿಡ್ತಾರೆ. ಪುಟ್ಟ ಮಕ್ಕಳಿಗೆ ವಸ್ತುವಿನ ಬೆಲೆಯಾಗಲೀ, ಮೌಲ್ಯವಾಗಲೀ ಗೊತ್ತಿರಲ್ಲ. ಹೀಗಾಗಿ ಮಕ್ಕಳಲ್ವಾ ಬಿಡು ಅಂತ ಸುಮ್ಮನಾಗಬಹುದು. ಆದ್ರೆ ಅದೇ ಮಕ್ಕಳು ಕೆಲವೊಮ್ಮೆ ಭಾರೀ ತಾಪತ್ರಯವನ್ನೇ ಉಂಟುಮಾಡಿಬಿಡುತ್ತವೆ .
ಅಮೆರಿಕದಲ್ಲಿ 2 ವರ್ಷದ ಬಾಲಕನೊಬ್ಬನ 1 ಸಾವಿರ ಡಾಲರ್(ಅಂದಾಜು ₹74,065)​ ಮೌಲ್ಯದ ಕರೆನ್ಸಿ ನೋಟನ್ನು ಹರಿದು ಚಿಂದಿ ಚಿತ್ರಾನ್ನ ಮಾಡಿದ್ದಾನೆ.

ಬಾಲಕನ ಪೋಷಕರಾದ ಬೆನ್​ ಹಾಗೂ ಜಾಕೀ ಬೆಲ್​ನ್ಯಾಪ್​ ಈ ಹಣವನ್ನು ಫುಟ್​​ಬಾಲ್​ ಟಿಕೆಟ್​​ ಖರೀದಿಸಲೆಂದು ಕೂಡಿಟ್ಟಿದ್ದರು. ಆದ್ರೆ ಅವರ 2 ವರ್ಷದ ಮಗ ಲಿಯೋ ಈ ಹಣವಿದ್ದ ಎನ್​ವಲಪ್​​ ತೆಗೆದುಕೊಂಡು ಶ್ರೆಡ್ಡರ್​​(ವಸ್ತುಗಳನ್ನ ತುಂಡು ತುಂಡು ಮಾಡುವ ಯಂತ್ರ)ದೊಳಗೆ ಹಾಕಿದ್ದಾನೆ.

1060 ಡಾಲರ್​ ನಗದು ಹಣವಿದ್ದ ಎನ್​ವಲಪ್​​​ ಕಳೆದ ವಾರ ಕಾಣೆಯಾಗಿತ್ತು. ನಾವು ಸುತ್ತಮುತ್ತ ಇಲ್ಲದಿದ್ದಾಗ ಲಿಯೋ ಹಣದ ಕವರ್​​  ಶ್ರೆಡ್ಡರ್​​ನೊಳಗೆ ಹಾಕಿದ್ದಾನೆ. ಇದನ್ನ ನೋಡಿ ಒಂದೆರಡು ನಿಮಿಷ ನಮಗೆ ಮಾತೇ ಹೊರಡಲಿಲ್ಲ. ಮುಂದೆ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ಮುಂದೊಂದು ದಿನ ಈ ಕಥೆ ಹೇಳಿಕೊಂಡು ನಗಬಹುದು ಅಷ್ಟೇ ಎಂದು ದಂಪತಿ ಹೇಳಿದ್ದಾರೆ. ಬಾಲಕನ ತಂದೆ ಬೆನ್​​ ಚೂರಾದ ನೋಟುಗಳ ಫೋಟೋವನ್ನ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ಆದ್ರೆ ಇದರಿಂದ ದಂಪತಿ ಬೇಸರ ಪಡುವ ಪ್ರಮೇಯವಿಲ್ಲ. ಯಾಕಂದ್ರೆ ಅವರು ತಮ್ಮ ಹಣವನ್ನು ಮರಳಿ ಪಡೆಯೋ ನಿರೀಕ್ಷೆ ಇದೆ. ಆದ್ರೆ ಅದು ಒಂದೆರಡು ವರ್ಷಗಳ ನಂತರ. ಚೂರಾದ ನೋಟುಗಳನ್ನ ಪಡೆದುಕೊಳ್ಳುವ ಇಲ್ಲಿನ ಸರ್ಕಾರಿ ಕಚೇರಿಯಿಂದ ವ್ಯಕ್ತಿಯೊಬ್ಬರು ಈ ದಂಪತಿಗೆ ಕರೆ ಮಾಡಿ ಹಣ ವಾಪಸ್​​ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ. ಒಂದು ಕವರ್​​ನಲ್ಲಿ ಚೂರಾದ ನೋಟುಗಳನ್ನ ಹಾಕಿ ನಮಗೆ ಕೊರಿಯರ್​ ಮೂಲಕ ಕಳಿಸಿ, ಒಂದೆರಡು ವರ್ಷದಲ್ಲಿ ನಿಮ್ಮ ಹಣ ವಾಪಸ್​ ಸಿಗಲಿದೆ ಎಂದು ಹೇಳಿದ್ದಾಗಿ ಬೆನ್ ತಿಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv