ರಾಜ್ಯದಲ್ಲಿ 2ನೇ ಹಂತದ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನ

ಶಿವಮೊಗ್ಗ: ರಾಜ್ಯದ 2ನೇ ಹಂತದಲ್ಲಿ ನಡೆದ 14 ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನವಾಗಿದೆ. ಇದಕ್ಕೆ ಎಲ್ಲರ ಶ್ರಮ ಕಾರಣ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ತಿಳಿಸಿದರು.

ನಗರದಲ್ಲಿನ ಪ್ರೆಸ್​ಟ್ರಸ್ಟ್​ನಲ್ಲಿ ಹಮ್ಮಿಕೊಳ್ಳಲಾದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ದಯಾನಂದ್, ಪ್ರತಿ ಯಶಸ್ಸಿನ ಹಿಂದೆ ಕಹಿ ಅನುಭವಗಳಿರುತ್ತವೆ. ಅದೇ ಅನುಭವ ಈ ಮತದಾನ ಜಾಗೃತಿಯಲ್ಲಿ ಕಂಡುಬಂದಿದೆ. ಪಕ್ಷ, ಪಾರ್ಟಿ, ಅಭ್ಯರ್ಥಿಗಳ ಗೆಲುವಿನ ಬಗ್ಗೆ ಸದಾ ಯೋಚಿಸುವ ನಾವು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಬೇಕು ಎಂದು ಅರಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸ್ವೀಪ್ ತಂಡ ಮತದಾನ ಸಂಬಂಧ ಸಾಕಷ್ಟು ಶ್ರಮ ವಹಿಸಿದೆ ಎಂದರು. ಕಾಲೇಜಿನ ವಿದ್ಯಾರ್ಥಿಗಳನ್ನ ಮತಚಲಾವಣೆ ಜಾಗೃತಿಯಲ್ಲಿ ತೊಡಗಿಸಿಕೊಂಡು ಮಾಡಿದ ಅಭಿಯಾನ ಜೀವನದ ಪಾಠವನ್ನ ಕಲಿಸಿದೆ. ಮತ ಕೇಳಲು ಮನೆ ಮನೆಗೆ ಹೋಗಲಾಗಿತ್ತು ಅಲ್ಲಿ ಆದ ತರೆಹೆವಾರಿ ಅನುಭವ ಬಹಳ ಪಾಠವನ್ನ ಕಲಿಸಿದೆ ಎಂದರು.

ಇನ್ನು  ಮತ ಚಲಾಯಿಸಿ ಎಂಬ ಅಭಿಯಾನ ನಡೆಸುತ್ತಿರುವಾಗ ವಿಲಕ್ಷಣ ರೀತಿಯ ಪ್ರಶ್ನೆಗಳು ಎದುರಾಯಿತು ಎನ್ನುವ ಜಿಲ್ಲಾಧಿಕಾರಿ ನಮ್ಮ ವಿದ್ಯಾರ್ಥಿಗಳು ಮತಚಲಾಯಿಸಿ ಎಂದು ಹೇಳಿದಾಗ ತಕ್ಷಣವೇ ಎದುರಾಗುತ್ತಿರುವ ಪ್ರಶ್ನೆ ಯಾಕೆ ಮತ ಚಲಾಯಿಸಬೇಕು ಎಂಬುದು. ಇದಕ್ಕೆ ನಾನು ಒಮ್ಮೆ ಮತದಾರನನ್ನ ಮಾತನಾಡಿಸಿ ಮತ ಚಲಾಯಿಸಬೇಕು ಯಾಕೆಂದರೆ ನಿನಗೆ ಎರಡೂ ಅವಕಾಶಗಳು ಮತದಾನದಲ್ಲಿದೆ. ಅಸಮಾಧಾನವಿದ್ದರೆ ನೋಟಾವನ್ನ ಒತ್ತುವ ಅವಕಾಶವಿದೆ. ಅಥವಾ ನಿಮಗೆ ಖುಷಿ ಇದ್ದರೆ ಆ ಪಕ್ಷಕ್ಕೆ ಮತಹಾಕಬಹುದು. ಹಾಗಾಗಿ ಮತಹಾಕುವ ಅವಕಾಶವನ್ನ ಕಳೆದುಕೊಳ್ಳಬಾರದು ಎಂಬುದು ನಮ್ಮ ಧ್ಯೇಯವಾಗಿದೆ ಎಂದು ದಯಾನಂದ್  ಹೇಳಿದ್ರು.

ಚುನಾವಣೆ ಮುಗಿದಿದೆ ಆದರೆ ನೀತಿ ಸಂಹಿತೆ ಫಲಿತಾಂಶ ಬರುವವರೆಗೂ ಮುಂದುವರಿಯುತ್ತದೆ. ಇದರಲ್ಲೂ ಸ್ವಲ್ಪ ಸಡಿಲತೆ ಮಾಡಲಾಗಿದೆ ಸರ್ಕಾರಿ ಸಭೆಗಳನ್ನ ನಡೆಸಬಹುದು, ತುರ್ತು ಕಾಮಗಾರಿ ಕೈಗೊಳ್ಳಬಹುದು, ಇದನ್ನ ಹೊರತು ಪಡಿಸಿ ಹೊಸ ಯೋಜನೆಗಳನ್ನ ಜಾರಿಗೊಳಿಸುವ ಹಾಗಿಲ್ಲವೆಂದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv