ಉಳುಮೆ ಮಾಡುವಾಗ ವಿದ್ಯುತ್​ ತಂತಿ ಸ್ಪರ್ಶಿಸಿ 2 ಎತ್ತುಗಳು ಸಾವು

ರಾಯಚೂರು: ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಎತ್ತುಗಳು ಸಾವನ್ನಪ್ಪಿರುವ ಘಟನೆ ಮಾನ್ವಿ ತಾಲೂಕಿನ ಕೊರವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹನುಮಪ್ಪ ನಾಯಕ್ ಎಂಬವರಿಗೆ ಸೇರಿದ್ದ ಎತ್ತುಗಳು ಇಂದು ಬೆಳಗ್ಗೆ ಸಾವನ್ನಪ್ಪಿವೆ. ಮುಂಜಾನೆ ಭೂಮಿ ಹದ ಮಾಡುವಾಗ ವಿದ್ಯುತ್ ತಂತಿಗಳು ತಗುಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಎತ್ತುಗಳು ಮೃತಪಟ್ಟಿವೆ. ಇನ್ನು ಘಟನೆಯಿಂದ ರೈತ ಹನುಮಪ್ಪ ಕಂಗಾಲಾಗಿದ್ದಾರೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.