ಚಾಕು ಇರಿದು ಯುವಕರ ಕೊಲೆ ಮಾಡಿದ್ದ ಆರೋಪಿಗಳು ಅರೆಸ್ಟ್​..!

ಹುಬ್ಬಳ್ಳಿ: ಎರಡು ಗುಂಪುಗಳ ನಡುವೆ ಕ್ಷುಲಕ ಕಾರಣಕ್ಕೆ ಜಗಳ ನಡೆದು ಇಬ್ಬರ ಯುವಕರಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣದ ಆರೋಪಿಗಳನ್ನು ಇಂದು ಪೊಲೀಸರು ಬಂಧಿಸಿದ್ದಾರೆ.

ಜೂನ್ 8 ರ ಮಧ್ಯರಾತ್ರಿ ನಗರದ ಅಜಂತಾ ಹೊಟೇಲ್ ಬಳಿ ಕೇಶ್ವಾಪುರ ನಿವಾಸಿ ರಿಯಾಜ್ ಸವಣೂರ (23), ಮಂಟೂರ್ ರಸ್ತೆಯ ಮಿಲತ್ ನಗರ ನಿವಾಸಿ ಫಿರೋಜ್ ಹನಸಿ(23), ಕೊಲೆಯಾಗಿದ್ದರು. ಪ್ರಕಣದ ಆರೋಪಿಗಳನ್ನು ಪೊಲೀಸರು ಬಲೆ ಬೀಸಿದ್ದರು. ಕೊನೆಗೂ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಹುಬ್ಬಳ್ಳಿ ಶಹರ ಪೊಲೀಸರು ಬಂಧಸಿದ್ದಾರೆ. ಇರ್ಶಾದ್ (24), ಮೋಸೀನ್ (25) ಬಂಧಿತ ಆರೋಪಿಗಳು. ಇನ್ನೂ ಕೆಲ ಆರೋಪಗಳು ನಾಪತ್ತೆಯಾಗಿದ್ದು, ಅವರ ಬಂದನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv