ಈಶಾನ್ಯ ಪದವೀಧರ ಕ್ಷೇತ್ರದ ಆರೂ ಜಿಲ್ಲೆಗಳಲ್ಲಿ ನೀರಸ ಮತದಾನ

ಕಲಬುರ್ಗಿ: ರಾಜ್ಯದ ದೊಡ್ಡ ವಿಧಾನ ಪರಿಷತ್​​ ಕ್ಷೇತ್ರವಾದ ಈಶಾನ್ಯ ಪದವೀಧರ ಕ್ಷೇತ್ರದ ಪರಿಷತ್​​ ಸ್ಥಾನಕ್ಕೆ ಇಂದು ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿದೆ. ಕ್ಷೇತ್ರದ ಆರೂ ಜಿಲ್ಲೆಗಳಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರೂ ಜಿಲ್ಲೆಗಳಲ್ಲಿ ಎರಡು ಗಂಟೆಯ ನಂತರವೂ ಕೇವಲ ಶೇ 2.71 ರಷ್ಟು ಮಾತ್ರ ಮತ ಚಲಾವಣೆಯಾಗಿದೆ. ಬೆಳಗ್ಗೆ 11ಗಂಟೆಯ ನಂತರ ಮತದಾನ ಬಿರುಸುಗೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ. ಈ ಕ್ಷೇತ್ರದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​​ ಸೇರಿದಂತೆ 10 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.