ಛಾವಣಿ ಮೇಲೆ ಹರಿಯುತ್ತಿತ್ತು 18 ಅಡಿ ಉದ್ದದ ದೈತ್ಯ ಹೆಬ್ಬಾವು..!

ಸಣ್ಣ ಪುಟ್ಟ ಹಾವು ನೋಡಿದ್ರುನೂ ಭಯಗೊಳ್ಳೋರಿದ್ದಾರೆ. ಹೀಗಿರುವಾಗ ಬರೋಬ್ಬರಿ 18 ಅಡಿ ಉದ್ದದ ಹೆಬ್ಬಾವು ಮನೆಯ ಛಾವಣಿ ಮೇಲಿದ್ದರೆ ಹೇಗಾಗಬೇಡ? ಇತ್ತೀಚೆಗೆ ಅಮೆರಿಕಾದ ಮಿಚಿಗನ್​ನಲ್ಲಿರೋ ಡಿಟ್ರಾಯ್ಟ್​​ ನಗರದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಬೃಹತ್​​ ಗಾತ್ರದ ಹೆಬ್ಬಾವು ಗ್ಯಾರೇಜ್​ ಒಂದರ ಛಾವಣಿ ಮೇಲೆ ಹರಿಯುತ್ತಿದ್ದುದನ್ನು ನೋಡಿ ಇಲ್ಲಿನ ನಿವಾಸಿಗಳು ಆತಂಕಗೊಂಡಿದ್ರು.

ಆ ಹಾವು ಛಾವಣಿ ಮೇಲೆ ಹೇಗೆ ಹೋಯ್ತು ಅಂತ ಜನ ಅಚ್ಚರಿಗೊಂಡಿದ್ರು. ನೋಡನೋಡ್ತಿದ್ದಂತೆ ಈ ದೈತ್ಯ ಹಾವನ್ನ ನೋಡಬೇಕೆಂದು ಸ್ಥಳದಲ್ಲಿ ಹತ್ತಾರು ಜನ ಸೇರಿದ್ರು. ಅವರಲ್ಲೊಬ್ಬ ಮಹಿಳೆ ಫೇಸ್​​ಬುಕ್​​ ಲೈವ್​ ಕೂಡ ಮಾಡಿದ್ದಾರೆ. ಅಯ್ಯೋ ದೇವ್ರೆ ಇಷ್ಟು ದೊಡ್ಡ ಹಾವು, ಅದು ಚಲಿಸುತ್ತಿದೆ ಅಂತ ಮಹಿಳೆ ಹೇಳೋದನ್ನ ವಿಡಿಯೋದಲ್ಲಿ ಕೇಳಬಹುದು. ಕೊನೆಗೆ ಯುವಕನೊಬ್ಬ ಛಾವಣಿ ಮೇಲೆ ಏರಿ ಹಾವನ್ನ ಹೊತ್ತುಕೊಂಡು ಬಂದು ರಕ್ಷಣೆ ಮಾಡಿದ್ದಾನೆ.

ಈ ಹಾವು 8 ವರ್ಷ ವಯಸ್ಸಿನದ್ದಾಗಿದ್ದು, ಇದನ್ನ ಇಲ್ಲಿನ ನಿವಾಸಿಯೊಬ್ಬರು ಸಾಕಿಕೊಂಡಿದ್ರು ಎಂದು ತಿಳಿದುಬಂದಿದೆ. ಜೂಲಿಯಟ್​ ಹೆಸರಿನ ಈ ಹಾವನ್ನ ಕೇಜ್​ನಲ್ಲಿ ಹಾಕಿದ್ದ ಮಾಲೀಕ ಬೀಗ ಹಾಕಲು ಮರೆತಿದ್ದ ಕಾರಣ ಅದು ತಪ್ಪಿಸಿಕೊಂಡಿದೆ. “ಇದು ನನ್ನ ತಪ್ಪು, ನಾನು ಸರಿಯಾಗಿ ಲಾಕ್ ಹಾಕಿರಲಿಲ್ಲ ಅಂತ ಅನ್ನಿಸುತ್ತದೆ. ಕೂಡಲೇ ಇಲ್ಲಿಗೆ ಬಂದು ಹಾವನ್ನ ವಾಪಸ್​ ಕರದುಕೊಂಡು ಹೋದೆ” ಎಂದು ಹಾವಿನ ಮಾಲೀಕ ಡೆವಿನ್ ಜೋನ್ಸ್​ ಹೇಳಿದ್ದಾರೆ. ಹಾವಿನ ರಕ್ಷಣೆಯ ವಿಡಿಯೋ ಸದ್ಯ ವೈರಲ್ ಆಗಿದೆ.

A python snake on top of the garage

Posted by Latonda Harvey on Thursday, April 18, 2019

 


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv