1 ಮಹಡಿ ಕಟ್ಟಡಕ್ಕಿಂತಲೂ ಉದ್ದದ ಹೆಬ್ಬಾವು ಸೆರೆ..!

ಮಿಯಾಮಿ: ಫ್ಲೋರಿಡಾದಲ್ಲಿ ಸಂಶೋಧಕರು ಹೊಸ ಮಾರ್ಗವನ್ನ ಬಳಸಿ ದೈತ್ಯ ಹೆಬ್ಬಾವೊಂದನ್ನ ಸೆರೆಹಿಡಿದಿದ್ದಾರೆ. ಈ ಹೆಬ್ಬಾವು 17 ಅಡಿ ಉದ್ದವಿದ್ದು, ಒಂದು ಜಿಂಕೆಯನ್ನು ತಿನ್ನಬಲ್ಲದಷ್ಟು ದೊಡ್ಡದಾಗಿದೆ. ಒಂದು ಮಹಡಿಯ ಕಟ್ಟಡಕ್ಕಿಂತಲೂ ಉದ್ದವಿರೋ ಈ ಹಾವು, ಸುಮಾರು 64 ಕೆಜಿ ತೂಕವಿದೆ. ದಕ್ಷಿಣ ಫ್ಲೋರಿಡಾದಲ್ಲಿ ಸೆರೆಹಿಡಿದಿರೋ ಅತ್ಯಂತ ಉದ್ದದ ಹಾವುಗಳಲ್ಲಿ ಇದೂ ಒಂದು ಎಂದು ಬಿಗ್ ಸೈಪ್ರಸ್​​ ನ್ಯಾಷನಲ್​​ ಪ್ರಿಸರ್ವ್​​ ಫೇಸ್​​ಬುಕ್​​ ಪೇಜ್​​ನಲ್ಲಿ ಹೇಳಿದೆ.

ಇನ್ನು ಈ ಹಾವನ್ನು ಹಿಡಿಯಲು ಸಂಶೋಧಕರು ಬಳಸಿದ ವಿಧಾನವೇ ಇಂಟರೆಸ್ಟಿಂಗ್. ಒಂದು ಗಂಡು ಹೆಬ್ಬಾವಿಗೆ ರೇಡಿಯೋ ಟ್ರ್ಯಾನ್ಸ್​​ಮಿಟ್ಟರ್​​ ಅಳವಡಿಸಿ, ಅದು ಹೆಣ್ಣು ಹಾವಿನೊಂದಿಗೆ ಇರುವಾಗ ಪತ್ತೆಹಚ್ಚಲು ಸಾಧ್ಯವಾಗುವಂತೆ ಮಾಡಲಾಗಿತ್ತು. ಈ ಮೂಲಕ ದೈತ್ಯ ಹೆಣ್ಣು ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಗಿದೆ.
ಹಾವಿನೊಳಗೆ 73 ಮೊಟ್ಟೆಗಳು ಸಹ ಪತ್ತೆಯಾಗಿವೆ.

ಈ ಪ್ರದೇಶದಲ್ಲಿ ಈ ಹಾವುಗಳನ್ನ ಬೇಟೆಯಾಡಬಲ್ಲ ಪ್ರಾಣಿಗಳು ಇಲ್ಲವಾದ್ರಿಂದ ಇವುಗಳ ಸಂಖ್ಯೆ ಹೆಚ್ಚಳದಿಂದ ಇಲ್ಲಿನ ಬೇರೆ ಪ್ರಾಣಿ ಸಂಕುಲಕ್ಕೆ ಆಪತ್ತು ಒದಗಬಹುದಿತ್ತೆಂದು ಸಂಶೋಧಕರು ಹೇಳಿದ್ದಾರೆ. ಈ ಹಾವುಗಳು, ಮೊಲ, ಪಕ್ಷಿಗಳನ್ನ ಮಾತ್ರವಲ್ಲದೆ, ಮೊಸಳೆಗಳು ಹಾಗೂ ದೊಡ್ಡ ಜಿಂಕೆಗಳನ್ನ ಸಹ ತಿಂದುಬಿಡಬಲ್ಲವು ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್​​ನಲ್ಲಿ 18 ಅಡಿ ಉದ್ದ, 68 ಕೆಜಿ ತೂಕದ ಹೆಬ್ಬಾವನ್ನು ಎವರ್​​ಗ್ಲೇಡ್ಸ್​ನಲ್ಲಿ ಸೆರೆಹಿಡಿಯಲಾಗಿತ್ತು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv