ಸಿಎಸ್​ಕೆಗೆ 162 ರನ್​ ಗುರಿ ನೀಡಿದ RCB

ಬೆಂಗಳೂರು: ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು 7 ವಿಕೆಟ್​ ಕಳೆದುಕೊಂಡು 161 ಗಳಿಸಲಷ್ಟೇ ಶಕ್ತವಾಗಿದೆ. ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಸಿಎಸ್​ಕೆ, ಕೊಹ್ಲಿ ಪಡೆಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಇನ್ನು ಆರ್​ಸಿಬಿ ಪರ ಪಾರ್ಥಿವ್​ ಪಟೇಲ್​ 53 ರನ್​ ಗಳಿಸಿದ್ರು. ಚೆನ್ನೈ ಪರ ಚಹಾರ್​, ಜಡೇಜ ಹಾಗೂ ಬ್ರಾವೋ ತಲಾ 2 ವಿಕೆಟ್​ ಪಡೆದುಕೊಂಡ್ರು.