‘ಅಭಿ’ ಚಿತ್ರ ತೆರೆಕಂಡು ಇಂದಿಗೆ 16 ವರ್ಷ..!

‘ಅಭಿ’…ಅಪ್ಪು ಚಿತ್ರದ ಯಶಸ್ಸಿನ ನಂತರ ಪುನೀತ್​ ರಾಜ್ ಕುಮಾರ್ ನಟನೆಯಲ್ಲಿ ಮೂಡಿಬಂದ 2ನೇ ಬ್ಲಾಕ್ ಬಾಸ್ಟರ್ ಸಿನಿಮಾ. ಚಿತ್ರದಲ್ಲಿ ಪುನೀತ್ ಮತ್ತು ರಮ್ಯಾ ಜೋಡಿಯ ಲವ್​ ಕೆಮಿಸ್ಟ್ರಿ ಸಖತ್ತಾಗಿಯೇ ವರ್ಕೌಟ್ ಆಗಿತ್ತು. ವಿಷಯ ಏನಂದ್ರೆ ಇದೇ ಚಿತ್ರದ ಮೂಲಕ ನಾಯಕಿಯಾಗಿ ಮೋಹಕ ತಾರೆ ರಮ್ಯಾ ಸ್ಯಾಂಡಲ್​ವುಡ್​ಗೆ ಪರಿಚಯವಾಗಿದ್ರು. ಇದೀಗ ಚಿತ್ರ ತೆರೆಕಂಡ ಜೊತೆಗೆ ರಮ್ಯಾ ಸಿನಿರಂಗಕ್ಕೆ ಕಾಲಿಟ್ಟು ಇಂದಿಗೆ ಬರೋಬ್ಬರಿ 16 ವರ್ಷಗಳು ಕಳೆದಿವೆ.

ಅಪ್ಪು ಜೊತೆ ರಮ್ಯಾ ಕಮಾಲ್..!
2003ರಲ್ಲಿ ದಿನೇಶ್ ಬಾಬು ನಿರ್ದೇಶನದಲ್ಲಿ ತೆರೆಕಂಡಿದ್ದ ಚಿತ್ರದಲ್ಲಿ ರಮ್ಯಾ ಮೊದಲ ಬಾರಿಗೆ ಅಪ್ಪು ಜೊತೆ ಸ್ಕ್ರೀನ್ ಶೇರ್ ಮಾಡಿ ಮಿಂಚಿದ್ರು. ಅಭಿ ಚಿತ್ರದ ಮೂಲಕ ರಮ್ಯಾಗೆ ಚಂದನವನದ ಅದೃಷ್ಟದ ಬಾಗಿಲು ತೆರೆದಂತಾಗಿತ್ತು. ನಂತರ ಆಕಾಶ್, ಅರಸು ಸೇರಿದಂತೆ ಹಲವು ಸಿನಿಮಾಗಳಲ್ಲಿ ಪುನೀತ್ ಜೊತೆಯಾಗಿದ್ರು. ಪ್ರೀತಿಗೆ ಧರ್ಮ, ಜಾತಿ ಯಾವುದು ಇಲ್ಲ. ಒಬ್ಬ ಕಾಲೇಜು ಹುಡುಗ ತನ್ನ ಗೆಳತಿಯನ್ನು ಪ್ರೀತಿಸಿದಾಗ ಧರ್ಮ ಅಡ್ಡ ಬಂದಾಗ ಎಲ್ಲ ಅಡೆ-ತಡೆಗಳನ್ನು ಹೇಗೆ ಎದುರಿಸುತ್ತಾರೆ ಅನ್ನೋದು ಚಿತ್ರದ ಒನ್ ಲೈನ್ ಸ್ಟೋರಿ. ಇನ್ನು ಚಿತ್ರದಲ್ಲಿ ಸತ್ಯಜಿತ್, ಉಮಾಶ್ರೀ, ಜಾನಕಿ, ಹೊನ್ನವಳ್ಳಿ ಕೃಷ್ಣ ಸೇರಿದಂತೆ ಬಹುತೇಕರು ಕಾಣಿಸಿಕೊಂಡಿದ್ರು. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದು ಯುವ ಮನಗಳಿಗೆ ಹೊಸ ಥರದಲ್ಲಿ ಚಿತ್ರ ಮೂಡಿಬಂದು ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಮೊದಲ ಮೋಹಕ ನೋಟದಲ್ಲೇ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟು, ಇಂದಿಗೂ ಪಟ್ಟದರಸಿಯಾಗಿ ಹಲವು ಸಿನಿಮಾಗಳಲ್ಲಿ ಮಿಂಚುತ್ತಿರೋ ರಮ್ಯಾ, ಬಹುಭಾಷಾ ಸಿನಿಮಾಗಳಲ್ಲೂ ಗುರುತಿಸಿಕೊಂಡು ಸೈ ಎನಿಸಿಕೊಂಡವರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv