ಚುನಾವಣೆ ಹಿನ್ನೆಲೆ ಧಾರವಾಡ ವ್ಯಾಪ್ತಿಯಲ್ಲಿ 16 ಪಿಂಕ್​ ಮತಗಟ್ಟೆ ಸ್ಥಾಪನೆ

ಧಾರವಾಡ: ನಾಳೆ ಲೋಕಸಭೆ ಚುನಾವಣೆಯ ಮತದಾನ ನಡೆಯುವ ಹಿನ್ನೆಲೆಯಲ್ಲಿ 16ಪಿಂಕ್​ ಮತಗಟ್ಟೆಗಳನ್ನ  ತೆರೆಯಲಾಗಿದೆ. ಧಾರವಾಡದ ಮೃತ್ಯುಂಜಯ ನಗರದಲ್ಲಿನ ಮೃತ್ಯುಂಜಯ ಪ್ರೌಢಶಾಲೆ, ಜಂಟಿ ಕೃಷಿ ನಿರ್ದೇಶಕರ ಕಚೇರಿ, ಡಾ. ದ.ರಾ. ಬೇಂದ್ರೆ ಭವನ, ಶಿಕ್ಷಕಿಯರ ತರಬೇತಿ ಸಂಸ್ಥೆಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ, ಜಂಟಿ ಕೃಷಿ ನಿರ್ದೇಶಕರ ಕಚೇರಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 16 ಸಖಿ ಮತಗಟ್ಟೆಗಳನ್ನ ತೆರೆಯಲಾಗಿದೆ. ಇನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿಯರು ವಿವಿಧ ತೆರನಾದ ರಿಬ್ಬನ್, ಬಲೂನ್​ಗಳಿಂದ, ಕಲರ್ ಕಲರ್ ಪೇಪರ್​ಗಳಿಂದ ಮತಗಟ್ಟೆಯನ್ನ ಅಲಂಕರಿಸಿದ್ದಾರೆ. ವಿಶೇಷ ಚೇತನರಿಗೆ 7 ಮತಗಟ್ಟೆಗಳನ್ನ ತೆರೆಯಲಾಗಿದೆ. ಹುಬ್ಬಳ್ಳಿ ಧಾರವಾಡದ ಕೃಷಿ ವಿವಿಯಲ್ಲಿ, RLS ಪ್ರೌಢಶಾಲೆ ಸಭಾ ಭವನದಲ್ಲಿ ವಿಕಲಚೇತನರ ಮತಗಟ್ಟೆಗಳನ್ನ ತೆರೆಯಲಾಗಿದೆ.  ಜಿಲ್ಲೆಯಲ್ಲಿ ಒಟ್ಟು 13,159 ವಿಕಲಚೇತನರಿದ್ದು ವಿಕಲಚೇತನರಿಗಾಗಿಯೇ  3268 ಸಿಬ್ಬಂದಿ ನೇಮಿಸಲಾಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv