ಹಜಾರಾ ಜನಾಂಗ ಟಾರ್ಗೆಟ್ ಮಾಡಿ ಬಾಂಬ್ ಸ್ಫೋಟ, 16 ಜನ ಬಲಿ..!

ಪಾಕಿಸ್ತಾನದ ಕ್ವೆಟ್ಟಾ ನಗರದಲ್ಲಿನ ಹಾಜಾರಗಂಜಿ ಮಾರ್ಕೆಟ್​ನಲ್ಲಿ, ಉಗ್ರರು ಬಾಂಬ್​ ದಾಳಿ ನಡೆಸಿ 16 ಜನರನ್ನ ಬಲಿಪಡೆದಿದ್ದಾರೆ. ಹಜಾರ ಜನಾಂಗದ ಜನರನ್ನ ಟಾರ್ಗೆಟ್ ಮಾಡಿ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಸುಮಾರು 24ಕ್ಕೂ ಹೆಚ್ಚಿನ ಜನ ಗಾಯಗೊಂಡಿದ್ದಾರೆ.
ಘಟನೆ ಬಗ್ಗೆ ಕ್ವೆಟ್ಟಾ ಡಿಐಜಿ ಅಬ್ದುಲ್​ ರಜಾಕ್​ ಚೀಮಾ ಮಾತನಾಡಿ, 12 ಜನರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಹಜಾರ ಜನಾಂಗದ ಜನರನ್ನ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಇನ್ನು ಈ ದಾಳಿ ‘ಗ್ರೀನ್​ ಗ್ರೋಸರ್ಸ್’​ ಅಂಗಡಿ ಬಳಿ ನಡೆಸಲಾಗಿದೆ. ದಾಳಿಯಲ್ಲಿ ಸತ್ತ 8ಜನ ಹಜಾರ ಜನಾಂಗದವರು. ಒರ್ವ ಸೈನಿಕ ಮೃತಪಟ್ಟಿದ್ದಾನೆ. ಆತನನ್ನ ಹಜಾರ ಜನಾಂಗದ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಘಟನೆಯಲ್ಲಿ ಮೃತಪಟ್ಟ ಉಳಿದವರು ಹಾಜಾರಗಂಜಿ ಮಾರ್ಕೆಟ್​ನಲ್ಲಿ ವ್ಯಾಪಾರ ನಡೆಸುತ್ತಿದ್ದವರು. ದಾಳಿಗೆ ಆಧುನಿಕ​ ಸ್ಫೋಟಕ ವಸ್ತು (IED) ಬಳಸಲಾಗಿತ್ತು ಎಂದು ಡಿಐಜಿ ಅಬ್ದುಲ್​ ರಜಾಕ್ ತಿಳಿಸಿದರು. 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv