ಫೀಸ್​ ಕಟ್ಟಿಲ್ಲವೆಂದು 16 ಬಾಲಕಿಯರನ್ನು ನೆಲಮಹಡಿಯಲ್ಲಿ ಕೂಡಿ ಹಾಕಿದರು..!

ದೆಹಲಿ: ದೇಶದಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದ್ದು, ಡೊನೇಷನ್ ಹೆಸರಿನಲ್ಲಿ ಖಾಸಗಿ ಶಾಲಾ-ಕಾಲೇಜುಗಳು ಪ್ರವೇಶಕ್ಕಾಗಿ ವಿದ್ಯಾರ್ಥಿಗಳ ಪೋಷಕರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿವೆ. ಡೊನೇಷನ್​ ಕಟ್ಟಿಲ್ಲ ಅಂದರೆ ಮಕ್ಕಳನ್ನು ಹಾಗೂ ಪೋಷಕರನ್ನು ಗೋಳಿಟ್ಟುಕೊಳ್ಳುತ್ತವೆ. ಇಂಥಹದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ.
ಪೂರ್ಣ ಶುಲ್ಕ ಕಟ್ಟಿಲ್ಲವೆಂದು ಶಾಲೆಯೊಂದು ಎಲ್​​ಕೆಜಿ, ಯುಕೆಜಿಯ 16 ಬಾಲಕಿಯರನ್ನು ನೆಲ ಮಹಡಿಯಲ್ಲಿ ಕೂಡಿ ಹಾಕಿದೆ. ಹಾಜ್ ಕ್ವಾಜಿ ಹೆಸರಿನ ಶಾಲೆ ನಮ್ಮ ಮಕ್ಕಳನ್ನು ಬೆಳಗ್ಗೆ 7.30 ರಿಂದ ಮಧ್ಯಾಹ್ನ 12 ರವರೆಗೆ ತಾಪಮಾನ ಅಧಿಕವಿರುವ ನೆಲ ಮಹಡಿಯ ಕೊಠಡಿಯಲ್ಲಿ ಕೂಡಿ ಹಾಕಿತ್ತು. ಮಕ್ಕಳು ಹಸಿವಿನಿಂದ ಅಸ್ವಸ್ಥಗೊಂಡಿದ್ದರು ಆದರೂ ಶಿಕ್ಷಕರು ತಲೆ ಕೆಡಿಸಿಕೊಂಡಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ತಿಳಿಸಿದ್ದಾರೆ.ಇನ್ನು ಪೊಲೀಸರು ಈ ಸಂಬಂಧ ಸೆಕ್ಷನ್​​ 75ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ತನಿಖೆ ಮುಂದುವರೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv