11 ಗಂಟೆ ವೇಳೆಗೆ ಶೇ. 14.37ರಷ್ಟು ಮತದಾನ

ಬೆಂಗಳೂರು: ಇಂದು ದೇಶದಾದ್ಯಂತ ಮೂರನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ಹಾಗೇ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾರರು ಬೂತ್​ಗಳತ್ತ ತೆರಳಿ ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಗ್ಗೆ 9 ಗಂಟೆ ವೇಳೆಗೆ ಶೇ. 7.38ರಷ್ಟು ಮತದಾನವಾಗಿತ್ತು. ಇದೀಗ 11 ಗಂಟೆ ವೇಳೆಗೆ ಶೇ. 14.37ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.  ಬೆಳಗ್ಗೆ 11ರ ಅಂಕಿಅಂಶದ ಪ್ರಕಾರ ಉತ್ತರಕನ್ನಡದಲ್ಲಿ ಅತೀ ಹೆಚ್ಚು(ಶೇ. 22.22) ಮತದಾನವಾಗಿದ್ದರೆ, ಬಿಜಾಪುರದಲ್ಲಿ ಅತೀ ಕಡಿಮೆ( ಶೇ.6.89) ಮತದಾನವಾಗಿದೆ.

ಬೆಳಗಾವಿ, ಚಿಕ್ಕೋಡಿ, ಕಲಬುರ್ಗಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಶಿವಮೊಗ್ಗ, ಧಾರವಾಡ, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಉತ್ತರ ಕನ್ನಡ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಚುನಾವಣೆ ನಡೆಯುತ್ತಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv