ರೈತರ ಸಾಲಮನ್ನಾ ಆಗಲು ಬೇಕೇ ಬೇಕಂತೆ ಈ 13 ದಾಖಲೆಗಳು!

ನವಲಗುಂದ: ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿ ಆದೇಶ ಹೊರಡಿಸಿದೆ. ಈ ಮಧ್ಯೆ, ಸಾಲಮನ್ನಾಕ್ಕೆ ಯಾವುದೇ ದಾಖಲೆಗಳು ಬೇಡ ಅಂತಾ ಹೇಳಿದೆ. ಆದರೆ ಬ್ಯಾಂಕ್‌ಗಳು ಮಾತ್ರ ದಾಖಲೆಗಳು ಬೇಕೇ ಬೇಕು ಎಂದು ಪಟ್ಟು ಹಿಡಿದಿವೆ. ಜಿಲ್ಲೆಯ ನವಲಗುಂದ ತಾಲೂಕಿನ ಗುಡಿಸಾಗರ ಸಹಕಾರ ಬ್ಯಾಂಕ್‌ ಸಾಲಮನ್ನಾ ಆಗುವ ರೈತರ ಎಲ್ಲಾ ದಾಖಲೆಗಳು ಬೇಕೆಂದು ಪಟ್ಟು ಹಿಡಿದಿದೆ.

ರೈತರ ಸಾಲಮನ್ನಾ ಆಗ ಬೇಕಾದರೆ 13 ದಾಖಲೆಗಳನ್ನು ತರಲೇಬೇಕೆಂದು ಸುತ್ತೋಲೆ ಹೊರಡಿಸಿದೆ. ಬ್ಯಾಂಕ್‌ಗಳು. ಸುಪ್ರೀಂಕೋರ್ಟ್ ಆಧಾರ್ ಕಾರ್ಡ್ ಕಡ್ಡಾಯ ಅಲ್ಲಾ ಅಂತಾ ಹೇಳಿದರೂ, ಬ್ಯಾಂಕುಗಳು ಮಾತ್ರ ಆಧಾರ್ ಕಾರ್ಡ್ ಬೇಕೇ ಬೇಕೆಂದು ಪಟ್ಟು ಹಿಡಿದಿವೆ.

ದಾಖಲೆಗಳ ಪಟ್ಟಿಯಲ್ಲಿ ಇವೆಲ್ಲ ಬೇಕೇಬೇಕು..
1. ಸಂಘದ ಸಾಲಗಾರನ ಪಾಸ್‌ಬುಕ್.
2. ಖಾತೆ ಅಥವಾ ಪಹಣಿ ಪತ್ರ.
3. ಆಧಾರ್ ಕಾರ್ಡ್.
4. ಪಾನ್ ಕಾರ್ಡ್.
5. ಚುನಾವಣೆಯ ಗುರುತಿನ ಚೀಟಿ.
6. ರೇಷನ್ ಕಾರ್ಡ್ ಜೆರಾಕ್ಸ್.
7. ರೇಷನ್ ಕಾರ್ಡ್ ಇಲ್ಲವಾದ್ರೆ ವಂಶವೃಕ್ಷ.
8. ಸಾಲಗಾರನ 6 ಫೋಟೋಗಳು.
9. ಸಾಲಗಾರನ ಡಿಸಿಸಿ ಬ್ಯಾಂಕ್‌ನ ಪಾಸ್‌ಬುಕ್.
10. ಮೊಬೈಲ್ ನಂಬರ್.
11. ಆದಾಯ ಮೂಲಗಳು.
12. ಸಾಲಮನ್ನಾ ದೃಢೀಕರಣ ಅರ್ಜಿ.
13. ಒಂದು ಫೈಲ್.

 

 

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv