ವಿವೇಕಾನಂದರ ಚಿಕಾಗೋ ಭಾಷಣದ 125 ನೇ ವರ್ಷಾಚರಣೆ: ಅದ್ಧೂರಿ ರಥಯಾತ್ರೆ

ಶಿರಸಿ: ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಹಿನ್ನೆಲೆಯಲ್ಲಿ ಯುವಾ ಬ್ರಿಗೇಡ್ ವತಿಯಿಂದ ಶಿರಸಿಯಲ್ಲಿ ರಥಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಶಿರಸಿಯ ಅಂಚೆ ವೃತ್ತದ ಬಳಿ ಪೂರ್ಣಕುಂಭ ಸ್ವಾಗತದೊಂದಿಗೆ ಪ್ರಾರಂಭವಾದ ರಥಯಾತ್ರೆ, ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ವಿಕಾಸಾಶ್ರಮ ಮೈದಾನದಲ್ಲಿ ಕೊನೆಗೊಂಡಿತು. ವಿಕಸಾಶ್ರಮ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ, ಮೊದಲಿಗೆ ಮಹಾತ್ಮಾ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀಯವರನ್ನ ನೆನೆಸಿಕೊಂಡರು. ಇಬ್ಬರು ಮಹಾನ್ ವ್ಯಕ್ತಿಗಳ ಸರಳತೆಗೆ ವಿವೇಕಾನಂದರೇ ಅದರ್ಶಪ್ರಾಯವಾಗಿದ್ದರು. ಅಂದಿನ ಮಹಾನ್ ಸನ್ಯಾಸಿಯಾಗಿದ್ದ ನರೇಂದ್ರರ ಬಟ್ಟೆಯ ಸಲುವಾಗಿ ಕೂಡ ಅಪಸ್ವರ ಎದ್ದಿದ್ದವು. ಹಾಗೇ ಇಂದಿನ ನರೇಂದ್ರನಿಗೂ ಅದೇ ರೀತಿ ಅಪಸ್ವರಗಳು ಎದ್ದಿವೆ ಎಂದು ವಿಷಾದ ವ್ಯಕ್ತಪಡಿಸಿದರು.

 ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv