ಹಾವೇರಿ ಗೋಲಿಬಾರ್​: 11ನೇ ವರ್ಷದ ರೈತ ಹುತಾತ್ಮ ದಿನಾಚರಣೆ

ಹಾವೇರಿ: ಹಾವೇರಿ ಗೋಲಿಬಾರ್​ ನಡೆದು ಇಂದಿಗೆ 11 ವರ್ಷ ಕಳೆದ ಹಿನ್ನೆಲೆ ವಿವಿಧ ರೈತ ಸಂಘಟನೆಗಳ ಮುಖಂಡರು ಮತ್ತು ರೈತರು ಸೇರಿ 11ನೇ ವರ್ಷದ ರೈತ ಹುತಾತ್ಮ ದಿನ ಆಚರಿಸಿಸಲಾಯಿತು.

ನಗರದ ಸಿದ್ದಪ್ಪ ವೃತ್ತದಲ್ಲಿ ವೀರಗಲ್ಲಿಗೆ ನೂರಾರು ರೈತರು ಪೂಜಾ ಸಲ್ಲಿಸಿದರು. ಬಳಿಕ ರಸಗೊಬ್ಬರಕ್ಕಾಗಿ ನಡೆದ ಗಲಾಟೆಯಲ್ಲಿ ಗೋಲಿಬಾರ್​ಗೆ ಬಲಿಯಾಗಿದ್ದ ರೈತ ಪುಟ್ಟಪ್ಪ ಹೊನ್ನತ್ತಿ, ಸಿದ್ದಲಿಂಗಪ್ಪ ಚೂರಿ ಸಮಾಧಿಗೆ ಭೇಟಿ ನೀಡಿ ನೂರಾರು ರೈತರು ನಮಸ್ಕರಿಸಿದ್ರು. ಪ್ರತಿಭಟನೆಯಲ್ಲಿ ವಿವಿಧ ರೈತ ಸಂಘಟನೆಗಳ ಮುಂಖಂಡರು ಹಾಗೂ ರೈತರು ಭಾಗಿಯಾಗಿದ್ದರು. ಈ ವೇಳೆ ಬೆಳೆ ಸಾಲ ಹಾಗೂ ಬೆಳೆ ವಿಮೆ ಪರಿಹಾರಕ್ಕಾಗಿ ಒತ್ತಾಯಿಸಿ ಪ್ರತಿಭಟಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv