ಗ್ರಾಮ ಪಂಚಾಯತ್​ ಸದಸ್ಯನ ನಿದ್ದೆ

ಚಿತ್ರದುರ್ಗ: ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ನಿದ್ದೆಗೆ ಜಾರಿದ ಪ್ರಸಂಗ ನಡೆದಿದೆ.
ಚಳ್ಳಕೆರೆ ತಾಲ್ಲೂಕು ಪಂಚಾಯತ್ ನೂತನ ಸಭಾಂಗಣದಲ್ಲಿ ಶಾಸಕ ರಘುಮೂರ್ತಿ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತಿತ್ತು. ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿದ್ದ ವೇಳೆ ಗ್ರಾಮ ಪಂಚಾಯತ್ ಸದಸ್ಯ ಸಾರ್ವಜನಿಕರ ಸಮಸ್ಯೆಗಳನ್ನು ಮರೆತು ನಿದ್ದೆ ಮಾಡುತ್ತಿದ್ದ! ಇನ್ನು, ಸುಮಾರು 10ಕ್ಕೂ ಹೆಚ್ಚು ಅಧಿಕಾರಿಗಳು ಮೊಬೈಲ್ ಸಂಭಾಷಣೆಯಲ್ಲಿ ತೊಡಗಿರುವುದೂ ಸಭೆಯಲ್ಲಿ ಕಂಡುಬಂದಿತು. ಪ್ರಗತಿ ಪರಿಶೀಲನೆ ಸಭೆಯಲ್ಲಿ ಜನರ ಸಮಸ್ಯೆ ಮರೆತು, ನಿರ್ಲಕ್ಷ್ಯ ವಹಿಸಿ, ನಿದ್ದೆ ಮಾಡುತ್ತಿರುವುದು ಸಾರ್ವಜನಿಕರ ಕುರಿತು ಇವರ ‘ಜನಪರ ಕಾಳಜಿ’ಗೆ ಕನ್ನಡಿ ಹಿಡಿದಂತಿದೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂರ್ಪಕಿಸಿ:contact@firstnews.tv