ಭಾರತದ ಪೋರನಿಗೆ ಅಂತರಾಷ್ಟ್ರೀಯ ಛಾಯಾಗ್ರಾಹಕ ಪ್ರಶಸ್ತಿ..!

ಪಂಜಾಬ್​: 10 ವರ್ಷದೊಳಗಿನ ವಯೋಮಾನದವರಿಗೆಂದೇ ಆಯೋಜಿಸಲಾಗುವ ‘ಅಂತರಾಷ್ಟ್ರೀಯ ವನ್ಯಜೀವಿ ಛಾಯಗ್ರಾಹಕ’ ಪ್ರಶಸ್ತಿಯನ್ನು ಭಾರತೀಯ ಮೂಲದ ಬಾಲಕ ಮುಡಿಗೇರಿಸಿಕೊಂಡಿದ್ದಾನೆ.
ಪಂಜಾಬ್​ ಮೂಲದ 10 ವರ್ಷದ ಹರ್ಷ್​ದೀಪ್​​ ಸಿಂಗ್​​ ಈ ಜಾಗತಿಕ ಪ್ರಶಸ್ತಿಗೆ ಭಾಜನನಾಗಿದ್ದಾನೆ. ಯುನೈಟೆಡ್​ ಕಿಂಗ್​ಡಮ್​​​ನ ನ್ಯಾಚುರಲ್​ ಹಿಸ್ಟರಿ ಮ್ಯೂಸಿಯಂ ವತಿಯಿಂದ ಕೊಡಲಾಗುವ ಈ ಪ್ರಶಸ್ತಿಗೆ ಹರ್ಷ್​ದೀಪ್​​ನ ‘ಪೈಪ್​ ಔಲ್ಸ್’ ಎಂಬ ಶಿರ್ಷಿಕೆಯ ಚಿತ್ರ ಆಯ್ಕೆಯಾಗಿದೆ. ಪಂಜಾಬ್​ನ ಕಪುರ್ಥಾಲದಲ್ಲಿ ಹಳೆಯ ಪೈಪ್​ವೊಂದರಲ್ಲಿ ಕುಳಿತಿರುವ ಎರಡು ಗೂಬೆಗಳ ಫೋಟೋಗೆ ಈ ಪ್ರಶಸ್ತಿ ಸಿಕ್ಕಿದೆ. ಇನ್ನು ಈ ಬಾಲಕ ತಾನು 4 ವರ್ಷದವನಿದ್ದಾಗಿಂದಲೇ ಫೋಟೋ ಕ್ಲಿಕ್ಕಿಸುವ ಹವ್ಯಾಸ ಬೆಳೆಸಿಕೊಂಡಿದ್ದಾನಂತೆ.

 ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv