103 ವರ್ಷದಲ್ಲೂ ಕುಗ್ಗದ ಉತ್ಸಾಹ, ವ್ಹೀಲ್​ ಚೇರ್​ನಲ್ಲಿ ಬಂದು ಮತದಾನ ಮಾಡಿದ ಶತಾಯುಷಿ

ಬೆಳಗಾವಿ: ಇಳಿ ವಯಸ್ಸಲ್ಲೂ ಬತ್ತದ ಉತ್ಸಾಹ. ಮತದಾನ ದೇಶದ ನಾಗರಿಕನ ಹಕ್ಕು, ನನ್ನ ಕರ್ತವ್ಯ ಅಂತಾ ಶತಾಯುಷಿ ಅಜ್ಜಿಯೊಬ್ಬರು ಇಂದು ಖುಷಿ, ಖುಷಿಯಿಂದ ಬಂದು ಮತಚಲಾಯಿಸಿದರು. ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ 103 ವರ್ಷದ ಅಜ್ಜಿ ಜೈತುನಬಿ ತೂರಗಲ್ಲ ತಮ್ಮ ಹಕ್ಕನ್ನು ಚಲಾಯಿಸಿದರು. ಬೆಳಗ್ಗೆಯೇ ಮತಗಟ್ಟೆ 21ಕ್ಕೆ ವ್ಹೀಲ್ ಚೇರ್ ಮೂಲಕ ಬಂದು ಮತಚಲಾಯಿಸಿದರು. ಇನ್ನು, ಇವರಿಗೆ ಮತ ಹಾಕಲು ಕುಟುಂಬ ಸದಸ್ಯರು, ಚುನಾವಣಾಧಿಕಾರಿಗಳು ಸಹಾಯ ಮಾಡಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv