ನಕಲಿ ಮದ್ಯ ಸೇವನೆ: 100ಕ್ಕೇರಿದ ಸಾವಿನ ಸಂಖ್ಯೆ, 186 ಮಂದಿ ಅರೆಸ್ಟ್​​..!

ಲಕ್ನೋ: ಉತ್ತರಪ್ರದೇಶ ಮತ್ತು ನೆರೆಯ ಉತ್ತರಾಖಂಡ್​​​ನಲ್ಲಿ ನಕಲಿ ಮದ್ಯದ ಹಾವಳಿಗೆ ಪ್ರಾಣ ತೆತ್ತವರ ಸಂಖ್ಯೆ 100ರ ಗಡಿ ದಾಟಿದೆ. ‘ವ್ಯಕ್ತಿಯೊಬ್ಬ 30 ಪ್ಲಾಸ್ಟಿಕ್​ ಪೊಟ್ಟಣಗಳಲ್ಲಿ ಸಾರಾಯಿ ಹಂಚಿದ್ದು, ಅದನ್ನು ಸೇವಿಸಿ ಮೊದಲ ದಿನವೇ 36 ಮಂದಿ ಮೃತಪಟ್ಟಿದ್ದರು. ಇದೀಗ ಚಿಕಿತ್ಸೆ ಫಲಿಸದೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಿದ್ದು, ಮೃತರ ಸಂಖ್ಯೆ 100ರ ಗಡಿ ದಾಟಿದೆ. ಒಂದೆರಡು ಸಾರಾಯಿ ಪೊಟ್ಟಣಗಳನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದ್ದು, ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಮದ್ಯದಲ್ಲಿ ಯೂರಿಯಾ, ಬ್ಯಾಟರಿ ಲಿಕ್ವಿಡ್​, ಕಾಸ್ಟಿಕ್​ ಸೋಡಾ ಮತ್ತು ಬಹುಶಃ ಹೆಚ್ಚಿನ ಪ್ರಮಾಣದಲ್ಲಿ ಮತ್ತೇರಿಸುವ ಪದಾರ್ಥವನ್ನ ಬಳಸಲಾಗಿದೆ ಎನ್ನಲಾಗಿದೆ. ಈಗಾಗಲೇ ಉತ್ತರಪ್ರದೇಶ ಮತ್ತು ಉತ್ತರಾಖಂಡ ಪೊಲೀಸರು ಜಂಟಿಯಾಗಿ ಆರೋಪಿಗಳಿಗೆ ಬಲೆ ಬೀಸಿದ್ದು, ಸುಮಾರು 186 ಜನರನ್ನ ವಶಕ್ಕೆ ಪಡೆದಿದ್ದಾರೆ. ಅಲ್ಲದೇ 35 ಜನರ ವಿರುದ್ಧ ದೂರು ಕೂಡ ದಾಖಲಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv