ಡಾಲರ್ ಆಸೆಗಾಗಿ ಅಫ್ಘಾನ್ ಪ್ರಜೆಗಳೆಂದು ಹೇಳಿದ್ದ 10,000 ಪಾಕಿಸ್ತಾನಿಯರು..!

ಇಸ್ಲಾಮಾಬಾದ್​​: ಪಾಕಿಸ್ತಾನದ ಆರ್ಥಿಕತೆ ಕುಸಿದಿರೋದು ಜಗತ್ತಿಗೇ ಗೊತ್ತಿರೋ ವಿಚಾರ. ದೀವಾಳಿಯಾಗಿರೋ ಪಾಕಿಸ್ತಾನ, ದೇಶದ ಬೊಕ್ಕಸ ತುಂಬಿಸಲು ಇನ್ನಿಲ್ಲದ ಪ್ರಯತ್ನ ಮಾಡ್ತಿದೆ. ಎಮ್ಮೆಗಳನ್ನ ಹರಾಜಿಗಿಟ್ಟಿದ್ದಾಯ್ತು, ಕತ್ತೆಗಳನ್ನ ಚೀನಾಗೆ ರಫ್ತು ಮಾಡಿ, ಅದರಿಂದ ಬರುವ ವಿದೇಶಿ ವಿನಿಮಯ ಹಣದಿಂದ ಆದಾಯ ಸಂಗ್ರಹಿಸಿಕೊಳ್ಳಲು ಮುಂದಾಗಿದ್ದೂ ಆಗಿದೆ. ಈ ಮಧ್ಯೆ ಡಾಲರ್​ ಆಸೆಗಾಗಿ, ತಾವು ಅಫ್ಘಾನ್​ ಪ್ರಜೆಗಳೆಂದು ನೋಂದಣಿ ಮಾಡಿಕೊಂಡಿದ್ದ ಸುಮಾರು 10 ಸಾವಿರ ಪಾಕಿಸ್ತಾನಿಯರನ್ನು ಅಲ್ಲಿನ ದಿ ನ್ಯಾಷನಲ್​​ ಡೇಟಾಬೇಸ್​​ ಆ್ಯಂಡ್​ ರೆಜಿಸ್ಟ್ರೇಷನ್​ ಅಥಾರಿಟಿ(NADRA) ಪತ್ತೆ ಹಚ್ಚಿದೆ.

ಸ್ವಯಂಪ್ರೇರಿತ ವಾಪಸಾತಿ ಯೋಜನೆಯಡಿ, ತನ್ನ ತಾಯ್ನೆಲಕ್ಕೆ ಹಿಂದಿರುಗುವ​​​ ಪ್ರತಿ ಅಫ್ಘಾನ್ ನಿರಾಶ್ರಿತರಿಗೆ ತಲಾ 400 ಡಾಲರ್​​ನಂತೆ ವಿಶ್ವ ಸಂಸ್ಥೆ ಹೈ ಕಮಿಷನ್ ಹಣ ಫಿಕ್ಸ್​ ಮಾಡಿದೆ. ಈ ಹಣದ ಆಸೆಗೆ ಪಾಕಿಸ್ತಾನಿಯರು, ತಾವು ಅಫ್ಘಾನ್​ ಪ್ರಜೆಗಳೆಂದು ರೆಜಿಸ್ಟರ್​ ಮಾಡಿಕೊಂಡಿದ್ದಾರೆ. ಪಾಕಿಸ್ತಾನದ NADRA ಚೇರ್​​ಮೆನ್​​ ಉಸ್ಮಾನ್​​ ಯೂಸಫ್​​ ಮೊಬೀನ್​​ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಕಂಪ್ಯೂಟರೈಸ್ಡ್​ ನ್ಯಾಷನಲ್​ ಐಡೆಂಟಿಟಿ ಕಾರ್ಡ್​​ ಪಡೆಯಲು ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಅವರೆಲ್ಲರ ಗುರುತಿನ ಚೀಟಿಗಳನ್ನ ಬ್ಲಾಕ್​ ಮಾಡಲಾಗಿದೆ ಎಂದು ಮೊಬೀನ್​ ತಿಳಿಸಿದ್ದಾರೆ. ಸ್ವಯಂಪ್ರೇರಿತ ವಾಪಸಾತಿ ಯೋಜನೆಯಡಿ ತನ್ನ ದೇಶಕ್ಕೆ ಹಿಂದಿರುಗಲು ಬಯಸುವ ಪ್ರತಿ ನಿರಾಶ್ರಿತ ವ್ಯಕ್ತಿಗೆ 400 ಡಾಲರ್ ಹಣ ನೀಡಲಾಗುತ್ತದೆ. ಅವರ ನವಜಾತ ಶಿಶುಗಳಿಗೂ ಹಣ ಸಿಗುತ್ತದೆ. ವಿವಿಧ ಸಂದರ್ಭಗಳಲ್ಲಿ ವಿಶ್ವ ಸಂಸ್ಥೆ ನೀಡುವ ಈ ಹಣ ಏರಿಕೆಯಾಗಿದ್ದೂ ಇದೆ. ಆದ್ರೆ ಸದ್ಯ ಪ್ರತಿ ವ್ಯಕ್ತಿಗೆ 400 ಡಾಲರ್​ ಕೊಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv