ಪಾಕ್​ನಿಂದ ಬರುತ್ತಿದ್ದ ಸಿಮೆಂಟ್​​ ಲಾರಿಯಲ್ಲಿ 10ಸಾವಿರ ಕೆಜಿ ಸ್ಫೋಟಕ, ಬೆಚ್ಚಿಬಿದ್ದ ಅಫ್ಘಾನಿಸ್ತಾನ..!

ಅಫ್ಘಾನಿಸ್ತಾನವಂತೂ ದಿನಬೆಳಗಾದ್ರೆ ಪಾಕ್​ ಪೋಷಣೆಯ ತಾಲಿಬಾನ್ ಉಗ್ರರ ಆಟಾಟೋಪದಿಂದ ಬಸವಳಿದಿದೆ. ಮೊನ್ನೆ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಂತಹ ಪೈಶಾಚಿಕ ಕೃತ್ಯ ಇನ್ನೇನು ಅಫ್ಘಾನಿಸ್ತಾನದಲ್ಲಿ ಘಟಿಸಬೇಕಿತ್ತು. ಆದ್ರೆ ಅಲ್ಲಿನ ಭದ್ರತಾ ಪಡೆಗಳು ಸಕಾಲದಲ್ಲಿ ಎಚ್ಚೆತ್ತು ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ಚಿವುಟಿಹಾಕಿದೆ.

ತಾಲೀಬಾನ್​ ಉಗ್ರರು ಸರಿಸುಮಾರು 10 ಸಾವಿರ ಕೆಜಿ ಸ್ಫೋಟಕಗಳನ್ನು ಸಿಮೆಂಟ್​​ ಲಾರಿಯಲ್ಲಿ ತುಂಬಿಕೊಂಡು ಇಡೀ ಅಫ್ಘಾನಿಸ್ತಾನವನ್ನೇ ಹೊಸಕಿಹಾಕಲು ಬರುತ್ತಿದ್ದಾಗ ಅಫ್ಘಾನಿಸ್ತಾನದ ಪುರಾತನ ನಗರವಾದ ಜಲಾಲಾಬಾದ್​ ಬಳಿ ಹೆದ್ದಾರಿಯಲ್ಲಿ ಭದ್ರತಾ ಪಡೆಗಳು ಲಾರಿಯನ್ನು ತಡೆದಿದೆ. ಇಷ್ಟೊಂದು ಭಾರೀ ಪ್ರಮಾಣದ ಸ್ಫೋಟಕಗಳನ್ನು ಪಾಕಿಸ್ತಾನದಿಂದ ತರಲಾಗುತ್ತಿತ್ತು ಎಂದು ಅಲ್ಲಿನ ಪ್ರಾಂತೀಯ ಗವರ್ನರ್​​ ಶಾ ಮೊಹಮದ್​ ಮಿಯಾಕೆಲ್​ ಹೇಳಿದ್ದಾರೆ.

ಇದನ್ನೂ ಓದಿ: ತಾಲಿಬಾನ್​​ಗೆ ಪಾಕಿಸ್ತಾನದ ಪೋಷಣೆ, ವಿಶ್ವಸಂಸ್ಥೆಗೆ ದೂರು ನೀಡಿದ ಅಫ್ಘಾನಿಸ್ತಾನ..!

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv