ನಲುಗಿದ ಜಪಾನ್.. ಈ ಫೋಟೋಗಳೇ ಸಾಕು ಪ್ರವಾಹ ವಿವರಿಸಲು..

‘ಮಹಾ’ಮಳೆರಾಯನ ಆರ್ಭಟಕ್ಕೆ ಜಪಾನ್ ಅಕ್ಷರಶಃ ಮುಳುಗಡೆ ಆಗಿದೆ. ಎಲ್ಲೆ ನೋಡಿದರೂ ನೀರೇ ನೀರು. ಕೆಂಪು ನೀರಿನ ಪ್ರವಾಹ ಇಡೀ ಜಪಾನಿಗರ ಬದುಕನ್ನೇ ತೊಳೆದುಕೊಂಡು ಹೋಗಿದೆ. ಸಾವು, ನೋವುಗಳ ಸಂಖ್ಯೆ ಲೆಕ್ಕಕ್ಕೇ ಸಿಗುತ್ತಿಲ್ಲ. ಅದೆಷ್ಟೋ ಮಂದಿ ತಮ್ಮ ಸಂಬಂಧಿಕರನ್ನು ಕಳೆದುಕೊಂಡು ಕಂಗಾಲಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ. ಉಕ್ಕಿ ಉಕ್ಕಿ ಬರುವ ದುಃಖವನ್ನ ತಡೆಯಲಾಗದೇ ಮಳೆ ನೀರಿನಂತೆ ಕಣ್ಣೀರು ಕೂಡ ಕೋಡಿಯಾಗಿ ಹರಿಸುತ್ತಿದ್ದಾರೆ.

ಕಳೆದ ಹದಿನೈದು ದಿನಗಳಿಂದ ಒಂದೇ ಸಮನೆ ಸುರಿದ ಮಳೆಗೆ ಒಟ್ಟು 130 ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮಳೆಯ ಅವಾಂತರದಿಂದಾಗಿ ಅನಾರೋಗ್ಯಕ್ಕೆ ತುತ್ತಾಗಿ ಅದೆಷ್ಟೋ ಮಂದಿ ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಗಳೆಲ್ಲಾ ತುಂಬಿ ತುಳುಕುತ್ತಿವೆ. ಚಿಕಿತ್ಸೆ ನೀಡೋದೇ ಕಷ್ಟವಾಗಿ ಬಿಟ್ಟಿದೆ.

ಕೊಚ್ಚಿ ಹೋದ ಹಡಗುಗಳು ಮುರಿದು ಬಿದ್ದ ಮನೆಗಳು..!

ಏಷ್ಯದ ಗ್ರೇಟ್ ಬ್ರಿಟನ್ ಎಂದೇ ಕರೆಸಿಕೊಳ್ಳುವ ಪುಟ್ಟ ಜಪಾನ್​​ಗೆ ಆಗಾಗ ಸಂಕಷ್ಟ ಎದುರಿಸುತ್ತಲೇ ಬಂದಿದೆ. ಭೂಕಂಪ, ಪ್ರವಾಹಗಳಂತಹ ಸಂದಿಗ್ಧ ಸ್ಥಿತಿಗಳಲ್ಲೂ ಫುಟ್ಬಾಲ್ ಚಂಡಿನಂತೆ ಪುಟಿದೇಳುವ ಜಪಾನ್​ಗೆ ಈ ಬಾರಿಯ ಪ್ರವಾಹ ಕೂಡ ದೊಡ್ಡ ಪೆಟ್ಟು ನೀಡಿದೆ. ನಾಗಸಾಕಿ, ಕುರಷಕಿ, ಓಕಯಮ ಸಂಪೂರ್ಣ ಜಲಾವೃತಗೊಂಡಿವೆ.

ಮಳೆಯ ಸಂಕಷ್ಟಕ್ಕೆ ಸಿಲುಕಿರುವವರನ್ನ ರಕ್ಷಣೆ ಮಾಡಲು ರಕ್ಷಣಾ ಪಡೆ ಹರಸಾಹಸ ಪಡುತ್ತಿದೆ. ಅಲ್ಲದೇ ಕ್ಯುಶು ಮತ್ತು ಶಿಕೊಕು ಐಸ್​​ಲ್ಯಾಂಡ್​ಗಳು  ಸಂಪೂರ್ಣ ಮುಳುಗಡೆ ಆಗಿದೆ. ಅಲ್ಲಿನ ಕಟ್ಟಡಗಳಲೆಲ್ಲಾ ಜಲಾವೃತಗೊಂಡಿವೆ. ಪ್ರತೀ ಬೀದಿಯ ರೋಸ್ತೆಗಳು ನದಿಯಾಗಿ ಪರಿವರ್ತನೆ ಆಗಿವೆ. ಪ್ರವಾಹದ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗಾಗಿ ಸೋಜಾ, ಒಕಾಯಂಗಳಲ್ಲಿ ಗಂಜಿ ಕೇಂದ್ರಗಳನ್ನ ತೆರೆಯಲಾಗಿದೆ.

 

 

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv