ದಾನ ಮಾಡೋದ್ರಲ್ಲೂ ಮುಖೇಶ್ ಅಂಬಾನಿ ಫಸ್ಟ್..!

ನವದೆಹಲಿ: ಮುಖೇಶ್ ಅಂಬಾನಿ ದೇಶದ ನಂಬರ್ 1 ಶ್ರೀಮಂತ. ಈ ವಿಷಯ ಈಗಾಗಲೇ ಎಲ್ಲರಿಗೂ ಗೊತ್ತಿದೆ. ಇದೀಗ ಮುಖೇಶ್ ಅಂಬಾನಿ ಮುಡಿಗೆ ಮತ್ತೊಂದು ಗರಿ ಸೇರಿದೆ. ಕೇವಲ ಶ್ರೀಮಂತ ವ್ಯಕ್ತಿಗಳಲ್ಲಷ್ಟೇ ಅಲ್ಲ, ದಾನ ಮಾಡುವವರಲ್ಲೂ ಮುಖೇಶ್ ಅಂಬಾನಿ ನಂಬರ್ 1 ಆಗಿದ್ದಾರೆ.

ಭಾರತದಲ್ಲಿ ಸುಮಾರು 61 ಮಂದಿ ಆಗರ್ಭ ಶ್ರೀಮಂತರಿದ್ದು, ಅವರೇ ಘೋಷಿಸಿರುವಂತೆ ಅವರ ವಾರ್ಷಿಕ ಆದಾಯ 100 ಕೋಟಿ ಅಥವಾ ಅದಕ್ಕಿಂತಲೂ ಹೆಚ್ಚಿದೆ. ಈ ಪೈಕಿ ಹಲವು ಶ್ರೀಮಂತರು ದಾನ ಧರ್ಮಗಳನ್ನೂ ಮಾಡ್ತಿದ್ದಾರೆ. ಹುರನ್ ಫಿಲಾಂಥ್ರಪಿ ಸಂಸ್ಥೆ ಬಿಡುಗಡೆ ಮಾಡಿರುವ 2018ರಲ್ಲಿ ಅತೀ ಹೆಚ್ಚು ದಾನ ಮಾಡಿದ ದಾನಿಗಳ ಪಟ್ಟಿಯಲ್ಲಿ ಸುಮಾರು 39 ಮಂದಿ ಭಾರತೀಯರು 10 ಕೋಟಿ ಅಥವಾ ಅದಕ್ಕಿಂತಲೂ ಹೆಚ್ಚಿನ ಹಣವನ್ನ ದಾನ ಮಾಡಿದ್ದಾರೆ.

ಈ ಪಟ್ಟಿಯಲ್ಲಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಇಂಡಸ್ಟ್ರೀಸ್ ಚೇರ್​ಮನ್ ಮುಖೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. 1 ವರ್ಷದ ಅವಧಿಯಲ್ಲಿ ಮುಖೇಶ್ ಅಂಬಾನಿ ದಾನ ಮಾಡಿರುವ ಮೊತ್ತ ಬರೊಬ್ಬರಿ 437 ಕೋಟಿ ರೂಪಾಯಿ..! ಇನ್ನು, ಎರಡನೇ ಸ್ಥಾನದಲ್ಲಿರುವ ಪಿರಮಲ್ ಗ್ರೂಪ್ಸ್ ಸಂಸ್ಥೆಯ ಅಜಯ್ ಪಿರಮಲ್ 200 ಕೋಟಿ ರೂಪಾಯಿಗಳನ್ನ ದಾನ ಮಾಡಿದ್ದಾರೆ.

2018ರ ಟಾಪ್​-10 ದಾನಿಗಳ ಪಟ್ಟಿ

 

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv