ಶ್ರೀಲಂಕಾ ಸರಣಿ ಸ್ಫೋಟ; ಮತ್ತೊಬ್ಬ ಕನ್ನಡಿಗ ಸೇರಿ ಮೃತ ಭಾರತೀಯರ ಸಂಖ್ಯೆ 10ಕ್ಕೆ ಏರಿಕೆ

ನವದೆಹಲಿ: ಶ್ರೀಲಂಕಾದಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಮತ್ತಿಬ್ಬರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಈ ಮೂಲಕ ಮೃತಪಟ್ಟವರ ಭಾರತೀಯರ ಸಂಖ್ಯೆ 10ಕ್ಕೆ ಏರಿದೆ. ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸುಷ್ಮಾ ಸ್ವರಾಜ್, ಒಟ್ಟು 10 ಮಂದಿ ಭಾರತೀಯರು ಮೃತಪಟ್ಟಿದ್ದಾರೆ. ಮೃತರ ಗುರುತು ಪತ್ತೆಕಾರ್ಯ ಮುಂದುವರಿದಿದೆ. ಈಗಾಗಲೇ ಭಾರತೀಯರಾದ ಎ ಮರೇಗೌಡ ಮತ್ತು ಹೆಚ್​ ಪುಟ್ಟರಾಜು ಅವರ ಮೃತದೇಹ ಯಾವುದು ಅನ್ನೋದು ಕನ್ಫರ್ಮ್ ಆಗಿದೆ. ಉಳಿದರವ ಮೃತದೇಹ ಗುರುತು ಪತ್ತೆಹಚ್ಚುವ ಸಲುವಾಗಿ ಹಾಗೂ ಅವರ ಮೃತದೇಹ ಸ್ವದೇಶಕ್ಕೆ ತರಲು ಎಲ್ಲಾ ಸಿದ್ಧತೆ ನಡೆಯುತ್ತಿದೆ. ಈ ಸಂಬಂಧ ಶ್ರೀಲಂಕಾದಲ್ಲಿ ಭಾರತೀಯ ರಾಯಭಾರಿ ಅಧಿಕಾರಿ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ. ಕಳೆದ ಭಾನುವಾರ ನಡೆದ ಸರಣಿ ಸ್ಫೋಟದಲ್ಲಿ ಒಟ್ಟು 310 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಇನ್ನು, ಶ್ರೀಲಂಕಾದಲ್ಲಿ ಭಾರತೀಯರ ರಾಯಭಾರಿ ಮಾಡಿರುವ ಟ್ವೀಟ್ ಅನ್ನ ಸುಷ್ಮಾ ಸ್ವರಾಜ್ ರಿಟ್ವೀಟ್ ಮಾಡಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv