ಖಾರ ಆದ್ರೂ ಹಸಿಮೆಣಸಿನಕಾಯಿಯಲ್ಲಿವೆ ಹಲವು ಹೆಲ್ತ್ ಬೆನಿಫಿಟ್ಸ್!

ನೀವು ಸ್ಪ್ಡೈಸಿ ಫುಡ್ ತಿನ್ನಲು ಇಷ್ಟಪಡುತ್ತಿದ್ದೀರಾ? ಹಾಗಾದ್ರೆ ಮಸಾಲೆಯುಕ್ತ ಆಹಾರದಲ್ಲಿ ಹಸಿರು ಮೆಣಸಿನಕಾಯಿ ಸೇರಿಸಿದ್ರೆ ನಿಮಗೆ ರುಚಿ ಎನಿಸಬಹುದು. ತರಕಾರಿಯಲ್ಲಿ ಹಸಿ ಮೆಣಸಿನಕಾಯಿಗೆ ವಿಶೇಷ ಸ್ಥಾನ ಇದೆ. ಹಸಿಮೆಣಸಿನಕಾಯಿ ಬಳಸುವುದರಿಂದ ಅಡುಗೆಗೆ ಒಳ್ಳೆಯ ರುಚಿ ಬರುತ್ತದೆ. ಆದ್ರೆ ಹಸಿರು ಮೆಣಸಿನಕಾಯಿಯನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಾ? ಎಂಬುದು ಹಲವರ ಪ್ರಶ್ನೆ. ಇದನ್ನು ತಿನ್ನುವುದರಿಂದ ಹಲವು ಲಾಭಗಳಿವೆ.

ಪೌಷ್ಟಿಕಾಂಶವುಳ್ಳ ಗ್ರೀನ್ ಚಿಲ್ಲಿ..!
ಹಸಿರು ಮೆಣಸಿನಕಾಯಿ ಸಂಪೂರ್ಣವಾಗಿ ಬೆಳೆಯುವ ಮೊದಲೇ ಅವುಗಳನ್ನು ಕೊಯ್ಲು ಮಾಡಲಾಗುತ್ತದೆ. ಇವುಗಳಲ್ಲಿ ಕ್ಯಾಲೋರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಹಸಿಮೆಣಸಿನಕಾಯಿ ಕೊಬ್ಬಿನ ಅಂಶವನ್ನ ಕಡಿಮೆ ಮಾಡುತ್ತದೆ. ತೂಕವನ್ನು ಕಡಿಮೆ ಮಾಡಲು ಹಸಿರು ಮೆಣಸಿನಕಾಯಿಯನ್ನು ತುಂಬಾ ಜನರು ಉಪಯೋಗಿಸುತ್ತಾರೆ. ಹಲವು ಪೌಷ್ಟಿಕಾಂಶಗಳು ಹಸಿರು ಮೆಣಸಿನಕಾಯಿಯಲ್ಲಿದ್ದು, ದೇಹದ ಆರೋಗ್ಯಕ್ಕೆ ಯೋಗ್ಯವಾಗ ಪೋಷಕಾಂಶಗಳನ್ನು ಒದಗಿಸುತ್ತದೆ. ವಿಟಮಿನ್ ಎ, ಸಿ, ಕೆ, ಹಾಗೂ ಫೈಟೋನ್ಯೂಟ್ರಿಯೆಂಟ್‌ ಅಂಶ ಇದರಲ್ಲಿದ್ದು, ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಗಟ್ಟುತ್ತದೆ.

100 ಗ್ರಾಂ ಹಸಿರು ಮೆಣಸಿನಕಾಯಿಯಲ್ಲಿ ಪೌಷ್ಟಿಕಾಂಶ ಎಷ್ಟಿರುತ್ತೆ?
40-ಕ್ಯಾಲೋರಿ
0.2 ಗ್ರಾಂ-ಟೋಟಲ್ ಫ್ಯಾಟ್
7 ಗ್ರಾಂ-ಸೋಡಿಯಂ
340 ಗ್ರಾಂ -ಪೋಟ್ಯಾಶಿಯಂ
9 ಗ್ರಾಂ- ಒಟ್ಟು ಕಾರ್ಬೋಹೈಡ್ರೇಟ್
2 ಗ್ರಾಂ-ಪ್ರೋಟೀಲ್
2 ಗ್ರಾಂ-ವಿಟಮಿನ್ A
0.01-ಕ್ಯಾಲ್ಸಿಯಂ
404%- ವಿಟಮಿನ್ ಸಿ
6 %- ಐರನ್
6 – 15%- ವಿಟಮಿನ್ ಬಿ
6 %-ಮೆಗ್ನೀಶಿಯಂ

ಹಸಿರು ಮೆಣಸಿನಕಾಯಿಯ ಪ್ರಯೋಜನಗಳು
ಜೀರ್ಣಶಕ್ತಿ ಹೆಚ್ಚಿಸುತ್ತದೆ. : ಹಸಿರು ಮೆಣಸಿನಕಾಯಿಯಲ್ಲಿ ಫೈಬರ್ ಹೆಚ್ಚಾಗಿರುವುದರಿಂದ ಅಜೀರ್ಣತೆ ತಡೆಗಟ್ಟುತ್ತದೆ. ಇದು ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಗ್ರೀನ್ ಚಿಲ್ಲಿ ತಿನ್ನುವುದರಿಂದ ಅಲ್ಸರ್‌ ನಿವಾರಿಸುತ್ತದೆ. ಆದ್ರೆ ಪೆಪ್ಟಿಕ್ ಅಲ್ಸರ್‌ ನಿಂದ ಬಳಲುತ್ತಿರುವವರು, ಹಸಿಮೆಣಸಿನಕಾಯಿ ತಿನ್ನುವುದನ್ನು ಅವಾಯ್ಡ್ಡ್ ಮಾಡಿ.

ತೂಕ ನಷ್ಟ
ಡಯಟ್‌ನಲ್ಲಿ ಹಸಿಮೆಣಸಿನಕಾಯಿ ಬಳಸುವುದರಿಂದ ದೇಹದ ಕೊಬ್ಬನ್ನು ಇದು ನಿವಾರಿಸುತ್ತದೆ. ನಮ್ಮ ದೇಹದಲ್ಲಿರುವ ಕ್ಯಾಲೋರಿಗಳನ್ನು ಬರ್ನ್​​ ಮಾಡುತ್ತದೆ.

ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ:
ನಿಯಮಿತವಾಗಿ ಹಸಿಮೆಣಸಿನಕಾಯಿ ತಿನ್ನುವುದರಿಂದ ಮಧುಮೇಹ ತಡೆಗಟ್ಟಬಹುದು. ಹಸಿರು ಮೆಣಸಿನಕಾಯಿ ಸೇವಿಸಿದರೆ, ದೇಹದಲ್ಲಿ ಹೆಚ್ಚಾಗುವ ಸಕ್ಕರೆ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಹಾಗೂ ದೇಹ ಸಮತೋಲನದಲ್ಲಿರಲು ಸಹಾಯಕಾರಿಯಾಗುತ್ತದೆ.

ಕ್ಯಾನ್ಸರ್ ತಡೆಯಲು ಸಹಾಯ
ಹಸಿಮೆಣಸಿನಕಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಹೆಚ್ಚಾಗಿರುವ ಕಾರಣ, ಕ್ಯಾನ್ಸರ್ ವಿರುದ್ಧ ಹೋರಾಡಲು ಇದು ಸಹಾಯಾರಿಯಾಗಿದೆ. ಶೀತ ಭಾದೆಗೂ ಮೆಣಸಿನಕಾಯಿ ಸಹಕಾರಿ: ಹಸಿರು ಮೆಣಸಿನಕಾಯಿಯಲ್ಲಿ ಕ್ಯಾಪ್ಸೈಸಿನ್ ಅಂಶ ಹೆಚ್ಚಾಗಿರುವುದರಿಂದ ಅತಿ ಬೇಗ ಶೀತವನ್ನು ಗುಣಪಡಿಸುತ್ತದೆ.

ಹಸಿಮೆಣಸಿನಕಾಯಿ ಅಸ್ಟಿಯೋಪೊರೋಸಿಸ್ ಅಪಾಯವನ್ನು ಕಡಿಮೆಗೊಳಿಸುತ್ತದೆ. ಹಸಿರು ಮೆಣಸಿನಕಾಯಿಯಲ್ಲಿ ವಿಟಮಿನ್ ಕೆ ಸಮೃದ್ಧವಾಗಿರುವುದರಿಂದ ಇದು ಕೀಲುಗಳ ಉರಿಯೂತವನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೇ ಹಸಿಮೆಣಸಿನಕಾಯಿಯಲ್ಲಿ ವಿಟಮಿನ್ ಸಿ ಹಾಗೂ ಬೀಟಾ ಕ್ಯಾರೋಟಿನ್‌ ಹೆಚ್ಚಾಗಿದ್ದು, ಕಣ್ಣಿಗೆ ಸಹಕಾರಿ. ಮೆಣಸಿನಕಾಯಿ ದೇಹದಲ್ಲಿ ರೋಗ ನಿರೋಧಕ ಹೆಚ್ಚಿಸುತ್ತದೆ. ವಿಟಮಿನ್ ಸಿ , ಇ, ಮತ್ತು ಕೆ ಫಿಟೋಸ್ಟೆರಾಲ್ , ಬೀಟಾ ಕ್ಯಾರೋಟಿನ್ ದೇಹವನ್ನು ಆರೋಗ್ಯವಾಗಿರಸಲು ಸಹಾಯ ಮಾಡುತ್ತದೆ.

ಹಸಿಮೆಣಸಿನಕಾಯಿಯ ಸೈಡ್ ಎಫೆಕ್ಟ್..!

1. ಹಸಿಮೆಣಸಿನಕಾಯಿಯಲ್ಲಿ ಡೈಯಟರಿ ಫೈಬರ್ ಹೆಚ್ಚಾಗಿದ್ದರೂ, ಅತಿಯಾಗಿ ಹಸಿರು ಮೆಣಸಿನಕಾಯಿ ಬಳಸುವುದರಿಂದ ಲೂಸ್ ಮೋಷನ್ ಹಾಗೂ ಅತಿಸಾರಕ್ಕೆ ಕಾರಣವಾಬಹುದು.
2. ಅತಿಯಾಗಿ ಹಸಿರು ಮೆಣಸಿನಕಾಯಿ ತಿನ್ನುವುದರಿಂದ ಗುದನಾಳ ಉರಿಯೂತವನ್ನು ಉಂಟು ಮಾಡಬಹುದು. ಅಲ್ಲದೇ ಪೈಲ್ಸ್ ನಿಂದ ಬಳಲುತ್ತಿರುವವರು ಹಸಿಮೆಣಸಿನಕಾಯಿ ಬಳಸಬಾರದು.
3. ಹಸಿರು ಮೆಣಸಿನಕಾಯಿ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಇದು ಗರ್ಭಿಣಿಯರಿಗೆ ಹಾನಿಕಾರಕ. ಗರ್ಭಿಣಿಯರು ಹಸಿಮೆಣಸಿನಕಾಯಿ ತಿನ್ನುವುದನ್ನು ಅವಾಯ್ಡ್​ ಮಾಡಬೇಕು.
4. ಮೆಣಸಿನಕಾಯಿ ಹೆಚ್ಚಿನ ಪ್ರಮಾಣದ ಕ್ಯಾಪ್ಸೈಸಿಯನ್ನ ಒಳಗೊಂಡಿದೆ. ಇದನ್ನು ಹೆಚ್ಚಾಗಿ ತಿನ್ನುವುದರಿಂದ ದೇಹಕ್ಕೆ ವಿಷಕಾರಿಯಾಗಬಲ್ಲದ್ದು.

ಹಸಿಮೆಣಸಿನಕಾಯಿ ಹಲವು ಆರೋಗ್ಯ ಪ್ರಯೋಜನಗಳನ್ನ ನೀಡುವುದರ ಜೊತೆಗೆ ಇದರ ಅತಿಯಾದ ಬಳಕೆಯಿಂದ ಸೈಡ್​ ಎಫೆಕ್ಟ್ಸ್​ ಉಂಟಾಗಬಹುದು. ಹೀಗಾಗಿ ಹಸಿಮೆಣಸಿನಕಾಯಿ ಬಳಕೆ ಲಿಮಿಟ್​​ನಲ್ಲಿದ್ದರೆ ಒಳ್ಳೆಯದು. ಮಿತವಾಗಿ ಬಳಸಿದರೆ ಇದು ಆರೋಗ್ಯಕ್ಕೆ ಉತ್ತಮ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv