1 ಕ್ಷೇತ್ರ.. 7 ಅಭ್ಯರ್ಥಿಗಳು.. 80,000 ಸೆಕ್ಯೂರಿಟಿ..!

ರಾಯ್​ಪುರ್​, ಛತ್ತೀಸ್​ಗಢ: ನಕ್ಸಲ್​​ ಪೀಡಿತ ಛತ್ತೀಸ್​ಗಢದಲ್ಲಿ ಇಂದು ಮೊದಲ ಹಂತದ ಚುನಾವಣೆಗೆ ಪೂರ್ವ ಸಿದ್ಧತೆ ನಡೆದಿದ್ದು, ಎಲ್ಲ ಕಡೆ ಹದ್ದಿನ ಕಣ್ಣಿಡಲಾಗಿದೆ. ವಿಶೇಷ ಅಂದ್ರೆ, ಛತ್ತೀಸ್​ಗಢದ ಬಸ್ತಾರ್​ ಕ್ಷೇತ್ರದಲ್ಲಿ 7 ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. ಆದ್ರೆ, ಈ ಕ್ಷೇತ್ರದಲ್ಲಿ ಶಾಂತಿ ಕಾಪಾಡಲು ಹಾಗೂ ಕ್ರಮಬದ್ಧ ಮತದಾನಕ್ಕೆ ಬರೋಬ್ಬರಿ 80 ಸಾವಿರ ಭದ್ರತಾ ಪಡೆಯನ್ನ ನಿಯೋಜನೆಗೊಳಿಸಲಾಗಿದೆ. ನಕ್ಸಲ್​ ದಾಳಿ ಹಾಗೂ ಚುನಾವಣಾ ಬಹಿಷ್ಕಾರದ ಧ್ವನಿ ಕೇಳಿ ಬಂದಿರೋದ್ರಿಂದ ಮುಂಜಾಗ್ರತಾ ಕ್ರಮವಾಗಿ ಇಷ್ಟೊಂದು ಸಂಖ್ಯೆಯ ಪಡೆಯನ್ನ ಭದ್ರತೆಗಾಗಿ ನಿಯೋಜಿಸಲಾಗಿದೆ. ವೋಟಿಂಗ್​ ಬೂತ್​ ಹಾಗೂ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಟೈಟ್​ ಸೆಕ್ಯೂರಿಟಿ ಜೊತೆಗೆ ಡ್ರೋನ್​​​​​​ ಕಣ್ಗಾವಲು ಕೂಡ ಇರಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ಶಾಸಕ ಭೀಮಾ ಮಾಂಡವಿ ಹಾಗೂ ನಾಲ್ಕು ಜನ ಭದ್ರತಾ ಪಡೆ ಸಿಬ್ಬಂದಿ ನಕ್ಸಲ್ ದಾಳಿಗೆ ಬಲಿಯಾಗಿದ್ರು. ಈ ಹಿನ್ನೆಲೆಯಲ್ಲಿ ಇದೊಂದೇ ಕ್ಷೇತ್ರದಲ್ಲಿ ಇಷ್ಟೊಂದು ಬಿಗಿ ಭದ್ರತೆಯಲ್ಲಿ ಚುನಾವಣೆ ನಡೆಸಲಾಗುತ್ತಿದೆ.