ಜಾಮೀನು ಪಡೆದ ಮೂರೇ ದಿನಕ್ಕೆ, ಮತ್ತೆ ಅಂದರ್​ ಆದ ಆರೋಪಿ..!

ಸಿದ್ದಾಪುರ: ಶ್ರೀಗಂಧದ ಮರ ಸಾಗಣೆ ಮಾಡುತ್ತಿದ್ದ ಆರೋಪಿ ಮುಬಾರಕ್​​ ಭಾಷಾ ಜಾಮೀನಿನ ಮೇಲೆ ಹೊರ ಬಂದ ಮೂರು ದಿನಗಳ ಬಳಿಕ, ಮತ್ತೆ ಶ್ರೀಗಂಧ ಕಳ್ಳಸಾಗಣೆ ಮಾಡುತ್ತಿದ್ದ ವೇಳೆ ಅರಣ್ಯಾಧಿಕಾರಿಗಳಿಂದ ಬಂಧನಕ್ಕೀಡಾಗಿದ್ದಾನೆ.

ಸಿದ್ದಾಪುರದ ಹೊಸೂರು ಅರಣ್ಯ ಪ್ರದೇಶದಲ್ಲಿ ಮುಬಾರಕ್, ಗಂಧದ ಮರ ಸಾಗಣೆ ಮಾಡುತ್ತಿದ್ದ ವೇಳೆ ಸುಮಾರು ₹ 60 ಸಾವಿರ ಮೌಲ್ಯದ 15.5 ಕೆ.ಜಿ. ಗಂಧದ ಮರದ ದಿಮ್ಮಿಗಳನ್ನ ವಶಪಡಿಸಿಕೊಂಡು, ಅರಣ್ಯಾಧಿಕಾರಿಗಳು ಆರೋಪಿಯನ್ನು ಬಂಧಿಸಿ, ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಸಿದ್ದಾಪುರ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv