ಟೀಮ್ ಇಂಡಿಯಾ ಆಟಗಾರರ ನಡುವೆ ಶುರುವಾಗಿದೆ ಬಿಗ್ ಫೈಟ್..!

2019ರ ವಿಶ್ವಕಪ್​ಗೆ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಆಗಲೇ ಟೀಮ್ ಇಂಡಿಯಾದಲ್ಲಿ ಅವಕಾಶಕ್ಕಾಗಿ ಆಟಗಾರರ ನಡುವೆ, ಬಿಗ್ ಫೈಟ್ ಶುರುವಾಗಿದೆ. ಇತ್ತೀಚಿಗಷ್ಟೆ ನ್ಯೂಜಿಲೆಂಡ್ ಟಿ-ಟ್ವೆಂಟಿ ಸರಣಿಯಲ್ಲಿ ಫಾಸ್ಟ್ ಬೌಲಿಂಗ್ ಆಲ್​ರೌಂಡರ್ ಸ್ಲಾಟ್​ಗಾಗಿ ಹಾರ್ದಿಕ್ ಪಾಂಡ್ಯ ಮತ್ತು ವಿಜಯ್ ಶಂಕರ್ ನಡುವೆ ಕಾಂಪಿಟೇಶನ್ ಶುರುವಾಗಿತ್ತು. ಇದೀಗ ಸ್ಪಿನ್ ಮತ್ತು ಫಾಸ್ಟ್ ಬೌಲಿಂಗ್ ಡಿಪಾರ್ಟ್​ಮೆಂಟ್​ನಲ್ಲೂ ಪೈಪೋಟಿ ಏರ್ಪಟ್ಟಿದೆ. ಕಿವೀಸ್ ವಿರುದ್ಧದ ಟಿ-ಟ್ವೆಂಟಿ ಸರಣಿಯಲ್ಲಿ ಬ್ಯಾಟ್​ ಮತ್ತು ಬಾಲ್ ಎರಡರಲ್ಲೂ ಸಾಲಿಡ್ ಪರ್ಫಾಮೆನ್ಸ್ ನೀಡಿದ ಕೃನಾಲ್ ಪಾಂಡ್ಯ, ವಿಶ್ವಕಪ್​ನಲ್ಲಿ ರವೀಂದ್ರ ಜಡೇಜಾರನ್ನ ಓವರ್​ ಟೇಕ್ ಮಾಡಲು ಮುಂದಾಗಿದ್ದಾರೆ. ಮತ್ತೊಂದೆಡೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಳಲ್ಲಿ ವೇಗಿ ಮೊಹಮ್ಮದ್ ಶಮಿ, ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಭುವನೇಶ್ವರ್ ಕುಮಾರ್ ಇತ್ತೀಚಿಗೆ ಅದ್ಯಾಕೋ ಬೌಲಿಂಗ್​ನಲ್ಲಿ ಕಂಟ್ರೋಲ್ ತಪ್ಪುತ್ತಿದಂತೆ ಕಾಣುತ್ತಿದೆ. ತನ್ನ ದುಬಾರಿ ಸ್ಪೆಲ್​ಗಳ ಮೂಲಕ ತಂಡವನ್ನ ಇಕ್ಕಟ್ಟಿಗೆ ಸಿಲುಕಿಸುತ್ತಿರುವ ಭುವಿ, ಮೊಹಮ್ಮದ್ ಶಮಿ ಜೊತೆ ಪೈಪೋಟಿ ಎದುರಿಸುತ್ತಿದ್ದಾರೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv