ಸ್ವಿಫ್ಟ್ ಕಾರಿಗೆ ಗುದ್ದಿದ ಪರಿವರ್ತನಾ ಯಾತ್ರೆಗೆ ಬರುತ್ತಿದ್ದ ಬಸ್

ನೆಲಮಂಗಲ: ಪರಿವರ್ತನಾ ಯಾತ್ರೆ ಸಮಾರೋಪಕ್ಕೆ ಬರುತ್ತಿದ್ದ ಬಸ್​ನ ಬ್ರೇಕ್ ಫೇಲ್ ಆಗಿ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್​​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನೆಲಮಂಗಲ ಸಮೀಪದ ನವಯುಗ ಟೋಲ್ ಬಳಿ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಬೆಂಗಳೂರಿನ ಅರಮನೆ ಮೈದಾನಕ್ಕೆ ತೆರಳುತ್ತದ್ದ ಖಾಸಗಿ ಬಸ್ ಹಾಗೂ ತೂಮಕೂರಿನ ಹೆಗ್ಗೆರೆ ನಿವಾಸಿ ಮಂಜುನಾಥ್ ಎಂಬುವರಿಗೆ ಸೇರಿದ ಸ್ವಿಫ್ಟ್ ಡಿಸೈರ್ ಕಾರು ಡಿಕ್ಕಿಯಾಗಿವೆ. ನೆಲಮಂಗಲ ಸಂಚಾರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published. Required fields are marked *