ಮೂರೇ ನಿಮಿಷದಲ್ಲಿ ನೂರು ಮೊಟ್ಟೆ ಇಟ್ಟ ಹಾವು..!

ಚಾಮರಾಜನಗರ: ಸಾಮಾನ್ಯವಾಗಿ ಹಾವುಗಳು ಮೊಟ್ಟೆಯಿಡಲು 2ರಿಂದ 3 ಗಂಟೆ ಸಮಯವನ್ನು ತೆಗೆದುಕೊಳ್ಳುತ್ತವೆ. ಆದ್ರೆ ಚಕ್ಕರ್‌ ಕಿಲ್‌ ಬ್ಯಾಕ್‌ ಜಾತಿಗೆ ಸೇರಿದ ಹಾವೊಂದು ಕೇವಲ ಎರಡರಿಂದ ಮೂರು ನಿಮಿಷದಲ್ಲಿ ಬರೋಬ್ಬರಿ 100ಕ್ಕೂ ಅಧಿಕ ಮೊಟ್ಟೆಗಳನ್ನಿಟ್ಟಿದೆ.

ಇಂಥ ಅಚ್ಚರಿಯ ಘಟನೆ ನಡೆದಿರೋದು ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿಯಲ್ಲಿ. ಗ್ರಾಮದ ಮಹದೇವಪ್ಪರ ಮನೆಯಲ್ಲಿ ಸಿಕ್ಕ ಹಾವನ್ನು ಸ್ನೇಕ್‌ ಮಹೇಶ್‌ ರಕ್ಷಿಸಿ ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದರು. ಬಳಿಕ ಅವರ ಮನೆಯಲ್ಲಿ ಅದು ಕೇವಲ ಮೂರೇ ನಿಮಿಷದ ಅವಧಿಯಲ್ಲಿ ನೂರಕ್ಕೂ ಅಧಿಕ ಮೊಟ್ಟೆಗಳನ್ನು ಇಟ್ಟಿದೆ. ಇದನ್ನು ಕಂಡು ಸ್ನೇಕ್‌ ಮಹೇಶ್‌ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಚಕ್ಕರ್‌ ಕಿಲ್‌ ಬ್ಯಾಕ್‌ ಜಾತಿಯ ಹಾವು ಸಾಮಾನ್ಯವಾಗಿ 40 ರಿಂದ 50 ಮೊಟ್ಟೆಗಳನ್ನು ಇಡುವ ಸಾಮರ್ಥ್ಯ ಹೊಂದಿದ್ದು. ಇಷ್ಟು ಮೊಟ್ಟೆಯನ್ನಿಡಲು 3ಗಂಟೆ ಅವಧಿ ಬೇಕಾಗುತ್ತದೆಯಂತೆ. ಸದ್ಯಕ್ಕೆ ಹಾವನ್ನು ಸ್ನೇಕ್‌ ಮಹೇಶ್‌ ಮನೆಯಲ್ಲೇ ಜೋಪಾನ ಮಾಡಿದ್ದು, ಮೊಟ್ಟೆ ಮರಿಗಳಾದ ಬಳಿಕ ಕಾಡಿಗೆ ತೆಗೆದುಕೊಂಡು ಹೋಗಿ ಬಿಡಲು ನಿರ್ಧಾರ ಮಾಡಿದ್ದಾರೆ.

 

 

Leave a Reply

Your email address will not be published. Required fields are marked *