ಮಿನಿ ಬಸ್​ ಪಲ್ಟಿ- ಬೆಂಗಳೂರು- ಮೈಸೂರು ಹೆದ್ದಾರಿ ಫುಲ್​ ಜಾಮ್​

ರಾಮನಗರ: ಸ್ನೇಹಿತನ ಮದುವೆಗಾಗಿ ಮೈಸೂರಿಗೆ ತೆರಳುತ್ತಿದ್ದ ಮಿನಿ ಬಸ್​ ಪಲ್ಟಿಯಾಗಿ 25 ಜನರು ಗಾಯಗೊಂಡಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಯ ಬಸವನಪುರ ಗೇಟ್​ ಬಳಿ ಈ ಘಟನೆ ಸಂಭವಿಸಿದ್ದು, ಬಸ್​ನಲ್ಲಿ ಪ್ರಯಾಣಿಸುತ್ತಿದ್ದ 25 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ ಎನ್ನಲಾಗ್ತಿದೆ. ಇನ್ನು ಬಸ್​ ಪಲ್ಟಿಯಾಗಿದ್ದಾರಿಂದ ಸುಮಾರು 5 ಕಿಲೋ ಮೀಟರ್​ವರೆಗೆ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಈ ಬಗ್ಗೆ ರಾಮನಗರ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *