ಗೋ ರಕ್ಷಣೆಗಾಗಿ ಬಿಜೆಪಿಯಿಂದ ಅಷ್ಟಯಾಮ ಮಹಾಯಜ್ಞ

ಬೆಂಗಳೂರು ಗ್ರಾಮಾಂತರ : ಬಿಜೆಪಿ ಗೋ-ಸಂರಕ್ಷಣಾ ಪ್ರಕೋಷ್ಠದಿಂದ ಅಷ್ಟಯಾಮ ಮಹಾಯಜ್ಞ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿರುವ ಶ್ರೀ ಸತ್ಯ ಗಣಪತಿ ದೇವಾಲಯದ ಮೈದಾನದಲ್ಲಿ ಮಹಾಯಜ್ಞವನ್ನ ಆಯೋಜಿಸಲಾಗಿದೆ. ಇಂದು ಮಧ್ಯಾಹ್ನ 2 ಗಂಟೆಯಿಂದ ನಾಳೆ ಮಧ್ಯಾಹ್ನ 2 ಗಂಟೆಯವರೆಗೂ ಸತತ 24 ಗಂಟೆಗಳ ಕಾಲ ಯಜ್ಞ ನಡೆಯಲಿದೆ. ಕಾನೂನು ಬಾಹಿರ ಕಸಾಯಿ ಖಾಎ ಮತ್ತು ಗೋ ಹತ್ಯೆಯನ್ನ ಖಂಡಿಸಿ ಅಷ್ಟಯಾಮ ಮಹಾಯಜ್ಞವನ್ನ ನಡೆಸಲಾಗುತ್ತಿದೆ. ಈ ಮಹಾಯಜ್ಞದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಸತೀಶ್ ರೆಡ್ಡಿ, ವಿಜಯ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

Leave a Reply

Your email address will not be published. Required fields are marked *